4 ದಿನ ಪೊಲೀಸ್ ವಶದಲ್ಲಿರುವ ರವಿ ಬೆಳಗೆರೆಯನ್ನು ಸ್ಥಳಾಂತರ ಮಾಡದೆ ಕಚೇರಿಯಲ್ಲಿಯೇ ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರು(ಡಿ.09): ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಸುಪಾರಿ ಹತ್ಯೆ ಮಾಡಲು ಉದ್ದೇಶಿಸಿದ ಪ್ರಕರಣದಲ್ಲಿ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಬಂಧನದ ನಂತರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಅವರ 2ನೇ ಪತ್ನಿ ಕೂಡ ನಾಪತ್ತೆಯಾಗಿದ್ದಾರೆ .

ಉತ್ತರಹಳ್ಳಿಯ ಯಶೋಮತಿ ಅವರ ನಿವಾಸಕ್ಕೆ ಬೀಗ ಹಾಕಲಾಗಿದ್ದು, ಎಲ್ಲಿ ಹೋಗಿದ್ದಾರೆ ಎಂಬುದರ ಸುಳಿವು ಲಭ್ಯವಿಲ್ಲ. ಅವರ ಫೇಸ್'ಬುಕ್ ಫೋಟೊ ಕೂಡ ಡಿಲೀಟ್ ಆಗಿದೆ. ಸಿಸಿಬಿ ಕಚೇರಿಯಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಸಿಬ್ಬಂದಿಯಿಂದ ಪೆನ್ನು, ಪೇಪರ್ ತರಿಸಿಕೊಂಡಿರುವ ಬೆಳಗೆರೆ ಬರೆಯಲು ಆರಂಭಿಸಿದ್ದಾರೆ.

4 ದಿನ ಪೊಲೀಸ್ ವಶದಲ್ಲಿರುವ ರವಿ ಬೆಳಗೆರೆಯನ್ನು ಸ್ಥಳಾಂತರ ಮಾಡದೆ ಕಚೇರಿಯಲ್ಲಿಯೇ ವಿಚಾರಣೆ ನಡೆಸಲಿದ್ದಾರೆ. ಅವರ ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ ಎಂದು ಸಿಸಿಬಿ ಡಿಸಿಪಿ ಜಿನೇಂದ್ರ ಕಣಗಾವಿ ತಿಳಿಸಿದ್ದಾರೆ.