ಉತ್ತರ ಪ್ರದೇಶದ ಅಲಿಗಢದಲ್ಲಿರುವ ಚಾಚಾ ನೆಹರು ಮದರಸಾದಲ್ಲಿ ಈ ಘಟನೆ ನಡೆದಿದೆ.

ನವದೆಹಲಿ(ಸೆ.20): ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ಅವರು ನಡೆಸುತ್ತಿರುವ ಮದರಸಾವೊಂದರಲ್ಲಿ ಕುಡಿಯುವ ನೀರಿನ ಕಂಟೇನರ್‌'ಗೆ ಇಬ್ಬರು ವ್ಯಕ್ತಿಗಳು ಇಲಿ ಪಾಷಾಣ ಬೆರೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದನ್ನು ಗಮನಿಸಿದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಹಿರಿಯರ ಗಮನಕ್ಕೆ ವಿಷಯ ತರುವ ಮೂಲಕ ನೂರಾರು ಬಾಲಕರ ಜೀವ ಉಳಿಸಿದ್ದಾನೆ.ಉತ್ತರ ಪ್ರದೇಶದ ಅಲಿಗಢದಲ್ಲಿರುವ ಚಾಚಾ ನೆಹರು ಮದರಸಾದಲ್ಲಿ ಈ ಘಟನೆ ನಡೆದಿದೆ.

ದುಷ್ಕರ್ಮಿಗಳು ವಾಟರ್ ಕೂಲರ್ ರಿಪೇರಿ ಮಾಡುವ ನೆಪದಲ್ಲಿ ಇಲಿ ಪಾಷಾಣ ಎಂದು ಬರೆದಿದ್ದ ಪ್ಯಾಕೆಟ್‌'ನಿಂದ ಪೌಡರ್ ಹಾಕುತ್ತಿರುವುದನ್ನು ನೋಡಿದ್ದ ಬಾಲಕನಿಗೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದರು. ಬಾಲಕನ ಮಾಹಿತಿಯನ್ವಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲಿಸಿದಾಗ ಇಲಿ ಪಾಷಾಣದ ಪೊಟ್ಟಣ ಪತ್ತೆಯಾಗಿದೆ.