ಆತ ನೂರಾರು ಕನಸುಗಳನ್ನು ಹೊತ್ತುಕೊಂಡ SSLC ಪರೀಕ್ಷೆ ಬರೆದಿದ್ದ. ಅವನ ಪ್ರಯತ್ನಕ್ಕೆ ಫಲ ಎಂಬಂತೆ  ಎಸ್ಎಸ್ಎಲ್ ಸಿಯಲ್ಲಿ ಜಿಲ್ಲೆಗೆ ರ್ಯಾಂಕ್ ಬಂದಿದ್ದಾನೆ. ಆದರೆ ಈ ಸುದ್ದಿ ಕೇಳೋಕ್ಕೆ ಆತನೇ ಇಲ್ಲ. ನಕಲಿ ವೈದ್ಯನ ಮಾನಗೇಡಿ ಕೃತ್ಯಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಕೋಲಾರ(ಮೇ.13): ಆತ ನೂರಾರು ಕನಸುಗಳನ್ನು ಹೊತ್ತುಕೊಂಡ SSLC ಪರೀಕ್ಷೆ ಬರೆದಿದ್ದ. ಅವನ ಪ್ರಯತ್ನಕ್ಕೆ ಫಲ ಎಂಬಂತೆ ಎಸ್ಎಸ್ಎಲ್ ಸಿಯಲ್ಲಿ ಜಿಲ್ಲೆಗೆ ರ್ಯಾಂಕ್ ಬಂದಿದ್ದಾನೆ. ಆದರೆ ಈ ಸುದ್ದಿ ಕೇಳೋಕ್ಕೆ ಆತನೇ ಇಲ್ಲ. ನಕಲಿ ವೈದ್ಯನ ಮಾನಗೇಡಿ ಕೃತ್ಯಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವಡ್ಡಹಳ್ಳಿ ನಿವಾಸಿಯಾದ ಅಭಿರಾಮ್ ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್'ಗೆ ಹೋಗಿದ್ದಾನೆ. ಕ್ಲಿನಿಕ್'ನಲ್ಲಿದ್ದ ನಕಲಿ ವೈದ್ಯ ನವೀನ್ ಕುಮಾರ್, ಇಂಜೆಕ್ಷನ್ ನೀಡುತ್ತಿದಂತೆ ಅಭಿರಾಮ್ ಕುಸಿದು ಬಿದ್ದಿದ್ದಾನೆ. ನಂತರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಭಿರಾಮ್ ಮೃತಪಟ್ಟಿದ್ದಾನೆ. ವೈದ್ಯನ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಸಾವನ್ನಪ್ಪಿರುವುದು ಪೋಷಕರ ಆರೋಪ. ಈ ಕುರಿತು ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪೋಷಕರ ಸಂಭ್ರಮ ನೋಡಿ ಅಭಿರಾಮ್ ಫೋಷಕರು ಕಣ್ಣಿರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ನಕಲಿ ವೈದ್ಯನ ಮಾನಗೇಡಿ ಕೆಲಸಕ್ಕೆ ಬಾಳ ಬದುಕಬೇಕಾಗಿದ್ದ ಅಭಿರಾಮ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ.