Asianet Suvarna News Asianet Suvarna News

ಆರೆಸ್ಸೆಸ್ಸನ್ನು ಉಗ್ರರಿಗೆ ಹೋಲಿಸಿ ರಮ್ಯಾ ಟ್ವೀಟ್‌

ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ರಾಷ್ಟ್ರೀಯ ಸ್ವಯಂ ಸೆವಕ ಸಂಘಟವನ್ನು ಉಗ್ರ ಸಂಘಟನೆಯಾದ ಮುಸ್ಲಿಂ ಬ್ರದರ್ ಹುಡ್ ಹೊತೆಗೆ ಹೋಲಿಕೆ ಮಾಡಿದ್ದಾರೆ. 

Ramya Comparisons  Between RSS to Muslim Brotherhood
Author
Bengaluru, First Published Aug 31, 2018, 12:03 PM IST

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದ ಸಂದರ್ಭದಲ್ಲಿ ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಅನ್ನು ಉಗ್ರರ ಜತೆ ನಂಟು ಹೊಂದಿದ ಆಪಾದನೆ ಎದುರಿಸುತ್ತಿರುವ, ಅರಬ್‌ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಬ್ರದರ್‌ ಹುಡ್‌ ಜತೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದರು. ಇದೀಗ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಕೂಡ ಅದನ್ನೇ ಮಾಡಿದ್ದಾರೆ.

ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂ ಬ್ರದರ್‌ಹುಡ್‌ ಎರಡಕ್ಕೂ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಇದೆ ಎಂಬ ಅರ್ಥಬರುವ ಸಂದೇಶವೊಂದನ್ನು ಅವರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ಮುಸ್ಲಿಂ ಬ್ರದರ್‌ಹುಡ್‌ ಹಾಗೂ ಆರ್‌ಎಸ್‌ಎಸ್‌ ಎರಡೂ ಸ್ಥಾಪನೆಯಾಗಿದ್ದು 1920ರಲ್ಲಿ. ಎರಡೂ ಸಂಘಟನೆಗಳ ಉದ್ದೇಶ ಜಾತ್ಯತೀತ ದೇಶವನ್ನು ಬದಲಿಸಬೇಕು ಎಂಬುದು. 2011ರಲ್ಲಿ ಅರಬ್‌ ದಂಗೆಯಿಂದ ಮುಸ್ಲಿಂ ಬ್ರದರ್‌ಹುಡ್‌ಗೆ ಶಕ್ತಿ ಬಂದಿತ್ತು. 2012ರಲ್ಲಿ ಮೊಹಮ್ಮದ್‌ ಮೋರ್ಸಿ ಅವರು ಈಜಿಪ್ಟ್‌ ಅಧ್ಯಕ್ಷರಾಗಿದ್ದರು. 2011ರಲ್ಲಿ ಅಣ್ಣಾ ಚಳವಳಿಯಿಂದಾಗಿ 2014ರಲ್ಲಿ ಮೋದಿ ಅಧಿಕಾರಕ್ಕೇರಿದರು’ ಎಂದು ರಮ್ಯಾ ಸಂದೇಶ ಬಿತ್ತರಿಸಿದ್ದಾರೆ.

 

Follow Us:
Download App:
  • android
  • ios