ನಿನ್ನೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮಾಜಿ ಸಂಸದೆ ರಮ್ಯಾ ಟೀಕಿಸಿದ್ದಾರೆ. ರಮ್ಯಾ ಟೀಕೆಗೆ ಟ್ವೀಟರ್'ನಲ್ಲಿ ನಟ ಜಗ್ಗೇಶ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು (ಫೆ.05): ನಿನ್ನೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮಾಜಿ ಸಂಸದೆ ರಮ್ಯಾ ಟೀಕಿಸಿದ್ದಾರೆ. ರಮ್ಯಾ ಟೀಕೆಗೆ ಟ್ವೀಟರ್'ನಲ್ಲಿ ನಟ ಜಗ್ಗೇಶ್ ತಿರುಗೇಟು ಕೊಟ್ಟಿದ್ದಾರೆ.
ದೊಡ್ಡವರ ಬಗ್ಗೆ ಮಾತಾಡುವ ಮಂದಿಗೆ ವಯಸ್ಸು, ಅನುಭವ ಬೇಕು. ವಿಶ್ವದ ಬಲಿಷ್ಠ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪ ಈಕೆ ಎಂದು ಟ್ವೀಟಿಸಿದ್ದಾರೆ.
ರಮ್ಯಾ ಹೇಳಿದ್ದೇನು?
'ನೀವು ನಶೆಯಲ್ಲಿದ್ದರೆ ಈಗೆ ಆಗೋದು' ಎಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭಾಷಣವನ್ನು ಟ್ವಿಟರ್'ನಲ್ಲಿ ಟೀಕಿಸಿದ್ದರು. ನಟಿ ಕಂ ಮಾಜಿ ಸಂಸದೆ ರಮ್ಯಾ ಅವರಿಗೆ ಗರಂ ಆಗಿರುವ ನಟ ಗಣೇಶ್ ಪತ್ನಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಟ್ವಿಟರ್'ನಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಜಗ್ಗೇಶ್ ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ.
