ಅಖಿಲೇಶ್ ಯಾದವ್ ಬೆಂಬಲಿಗರಿಂದ ಜೀವ ಬೆದರಿಕೆಯಿದೆಯೆಂದು ಸಮಾಜವಾದಿ ಪಕ್ಷದಿಂದ ಉಚ್ಚಾಟಿತರಾದ ಅಮರ್ ಸಿಂಗ್ ಆರೋಪಿಸಿದ್ದಾರೆ.  

ನವದೆಹಲಿ (ಜ.22): ಅಖಿಲೇಶ್ ಯಾದವ್ ಬೆಂಬಲಿಗರಿಂದ ಜೀವ ಬೆದರಿಕೆಯಿದೆಯೆಂದು ಸಮಾಜವಾದಿ ಪಕ್ಷದಿಂದ ಉಚ್ಚಾಟಿತರಾದ ಅಮರ್ ಸಿಂಗ್ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಅಖಿಲೇಶ್ ಬಗ್ಗೆ ಮೃದುವಾಗಿ ಮಾತನಾಡುವುದರ ಅರ್ಥ ಪಕ್ಷಕ್ಕೆ ನನ್ನನ್ನು ಪುನಃ ಸೇರಿಸಿಕೊಳ್ಳುವುದಕ್ಕೆ ಮಾಡುತ್ತಿರುವ ಮನವಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಖಿಲೇಶ್ ಯಾದವ್ ಅರ್ಹನಿದ್ದಾಗ ಮಾತ್ರ ನಾನು ಶ್ಲಾಘಿಸುತ್ತೇನೆ. ಇದರರ್ಥ ಪಕ್ಷದಿಂದ ನನ್ನ ಉಚ್ಚಾಟನೆಯನ್ನು ರದ್ದುಗೊಳಿಸುವಂತೆ ಅವರನ್ನು ಕೇಳುತ್ತಿಲ್ಲವೆಂದು ಅಮರ್ ಸಿಂಗ್ ಹೇಳಿದ್ದಾರೆ.

ಅಮರ್ ಸಿಂಗ್ ಪಕ್ಷದೊಳಗೆ ಬಿರುಕು ಮೂಡಲು ಕಾರಣವೆಂದು ಅಖಿಲೇಶ್ ಬಣ ಆರೋಪಿಸಿತ್ತು. ಆದರೆ ಇದನ್ನೆಲ್ಲಾ ಬದಿಗಿಟ್ಟು ಅಮರ್ ಸಿಂಗ್, ಅಖಿಲೇಶ್ ಗೆ 'ಸೈಕಲ್' ಸಿಕ್ಕಾಗ ಅಭಿನಂದಿಸಿದ್ದರು. ಪಕ್ಷದೊಳಗೆ ಅಖಿಲೇಶ್ ರ ನಿಜಮುಖವನ್ನು ನಾನು ಪರಿಗಣಿಸುತ್ತೇನೆಂದು ಕೂಡಾ ಹೇಳಿದ್ದರು.