ಭೀಮಾನಾಯ್ಕ್ ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರು (ಡಿ.08): ಭೀಮಾನಾಯ್ಕ್ ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರಿನ ಭೂಸ್ವಾಧೀನ ಕಚೇರಿ ಸೇರಿದಂತೆ ಭೀಮಾನಾಯ್ಕ್ ಎಲ್ಲೆಲ್ಲಿ ಕೆಲಸ ಮಾಡಿದ್ದಾರೆಂಬುದರ ಬಗ್ಗೆ ಪೋಲಿಸರು ಮಾಹಿತಿ ಸಂಗ್ರಹಿಸುತ್ತಿದ್ದು ಅವರ ಪತ್ತೆಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಹಿನ್ನೆಲೆ
ಭ್ರಷ್ಟ ಅಧಿಕಾರಿ ಭೀಮಾನಾಯ್ಕ ರಾಜ್ಯದ ಹಲವೆಡೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ನಾಗೇಶ್ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದಲ್ಲದೇ ಬೇನಾಮಿ ಹೆಸರಿನಲ್ಲಿ ಸಾಕಷ್ಟು ಆಸ್ತಿ
ಖರೀದಿಸಿದ್ದಾರೆ. ಭೀಮಾನಾಯಕ್ ಬ್ಲ್ಯಾಕ್ &ವೈಟ್ ದಂಧೆಯಲ್ಲಿ ತೊಡಗಿದ್ದಾರೆ. ರೆಡ್ಡಿ ಮಗಳ ಮದುವೆಗೂ ಕಪ್ಪು ಹಣ ಬಿಳಿಯಾಗಿಸಿಕೊಟ್ಟಿದ್ದಾರೆ ಎಂದು ಭೀಮಾನಾಯ್ಕ ಡ್ರೈವರ್ ರಮೇಶ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ತನಿಖೆ ನಡೆಸಿ, ಭೀಮಾನಾಯ್ಕ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸಿಬಿಗೆ ನೀಡಿದ ದೂರಿನಲ್ಲಿ ನಾಗೇಶ್ ಆಗ್ರಹಿಸಿದ್ದಾರೆ.
