ಮಾಧ್ಯಮಗಳ ವರದಿಯಿಂದ ಬಡವರನ್ನು ಖಾಸಗಿ ಆಸ್ಪತ್ರೆಗೆ ಕರೆಸುವ ಹುನ್ನಾರವಾಗಿದೆ

ಕೋಲಾರ(ಆ.23): ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಯಾವುದೇ ನಿರ್ಲಕ್ಷ್ಯ ದಿಂದ ಸಂಭವಿಸಿಲ್ಲ. ಮಾಧ್ಯಮದಲ್ಲಿ ವಾಸ್ತವಾಂಶಕ್ಕೆ ದೂರವಾದ ವರದಿ ಭಿತ್ತರವಾಗುತ್ತಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದರು.

ಕೋಲಾರದ ರಂಗಮಂದಿರದ ಆವರಣದಲ್ಲಿ ಡಾ ಡಿ ದೇವರಾಜು ಅರಸು ಜಯಂತಿ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳ ವರದಿಯಿಂದ ಬಡವರನ್ನು ಖಾಸಗಿ ಆಸ್ಪತ್ರೆಗೆ ಕರೆಸುವ ಹುನ್ನಾರವಾಗಿದೆ. ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಸಂಜೀವಿನಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಯಾರೂ ಸಾಯೋದೆ ಇಲ್ವಾ' ಎಂದು ಮಾಧ್ಯಮದ ವರದಿಯನ್ನು ತಿರಸ್ಕರಿಸಿದರು.