ಬೆಳಗಾವಿ : ಇತ್ತ ಎಕ್ಸಿಟ್  ಪೋಲ್ ವರದಿಗಳು ಬಂದರೆ ಅತ್ತ ಕೈ ಅತೃಪ್ತ ಶಾಸಕ  ರಮೇಶ್ ಜಾರಕಿಹೊಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಒಂದು ವೇಳೆ ಎಕ್ಸಿಟ್ ಪೋಲ್ ವರದಿಗಳು ನಿಜವಾದಲ್ಲಿ ರಾಜ್ಯ ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆ ಎಂದು ವರದಿಗಳು ಹೇಳಿದ್ದು, ಇದೀಗ ರಮೇಶ್ ಜಾರಕಿಹೊಳಿ ಫಲಿತಾಂಶಕ್ಕೂ ಮೂಂಚೆ ಬೆಂಗಳೂರಿಗೆ ಆಗಮಿಸಿದ್ದಾರೆ.

"

ಫಲಿತಾಂಶದ ಬಳಿಕ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎನ್ನುತ್ತಿದ್ದಾರೆ. 

ಇತ್ತ ಬೆಂಗಳೂರಿನಲ್ಲಿ ಅತೃಪ್ತ  ಮುಖಂಡರೊಡನೆ ಸಭೆ ನಡೆಸಲು ಪ್ಲಾನ್ ಮಾಡಿ, ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ. 

ಈಗಾಗಲೇ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೆಲ ಶಾಸಕರೊಂದಿಗೆ ರಮೇಶ್ ಕಮಲ ಪಾಳಯಕ್ಕೆ ಆಗಮಿಸಲಿದ್ದಾರೆ ಬಿಜೆಪಿ ಮುಖಂಡರೇ ಹೇಳಿಕೆ ನೀಡಿದ್ದರು. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.