ಇತಿಹಾಸಕಾರ, ಲೇಖಕ ರಾಮಚಂದ್ರ ಗುಹಾ ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ಇಂದು ರಾಜಿನಾಮೆ ನೀಡಿದ್ದಾರೆ. ರಾಮಚಂದ್ರ ಗುಹಾರವರು ಈ ವರ್ಷ ಜನವರಿಯಲ್ಲಿ ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ಸುಪ್ರೀಂಕೋರ್ಟ್'ನಿಂದ ಆಯ್ಕೆಯಾಗಿದ್ದರು.

ನವದೆಹಲಿ (ಜೂ.01): ಇತಿಹಾಸಕಾರ, ಲೇಖಕ ರಾಮಚಂದ್ರ ಗುಹಾ ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ಇಂದು ರಾಜಿನಾಮೆ ನೀಡಿದ್ದಾರೆ. ರಾಮಚಂದ್ರ ಗುಹಾರವರು ಈ ವರ್ಷ ಜನವರಿಯಲ್ಲಿ ಬಿಸಿಸಿಐ ಆಡಳಿತ ಅಧಿಕಾರಿಗಳ ಮಂಡಳಿಗೆ ಸುಪ್ರೀಂಕೋರ್ಟ್'ನಿಂದ ಆಯ್ಕೆಯಾಗಿದ್ದರು.

ವೈಯಕ್ತಿಕ ಕಾರಣದಿಂದ ರಾಜಿನಾಮೆ ನೀಡಿರುವುದಾಗಿ ಗುಹಾರವರು ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಬಿಸಿಸಿಐಗೆ ನೂತನ ಆಡಳಿತ ಅಧಿಕಾರಿಗಳ ಮಂಡಳಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಇದರಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ, ವಿನೋದ್ ರೈ, ಮಾಜಿ ಮಹಿಳಾ ಕ್ರಿಕೆಟರ್ ಡೈನಾ ಎದುಲ್ಜಿ ಮತ್ತು ವಿಕ್ಮ್ ಲಿಮಾಯೇ ಆಯ್ಕೆಯಾಗಿದ್ದರು.