ರೀಲ್​ನಲ್ಲಿ ಮಿಂಚಿದ್ದ ಜೋಡಿ ಈಗ ರಿಯಲ್​ ಲೈಫ್​ನಲ್ಲಿ ಒಂದಾಗಿದ್ದಾರೆ. ಎರಡೂ ಕುಟುಂಬಸ್ಥರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು.

ಮಡಿಕೇರಿ(ಜು.03): ಕಿರಿಕ್ ಪಾರ್ಟಿಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮದುವೆ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನಡೀತು. ವಿರಾಜಪೇಟೆಯ ರಶ್ಮಿಕಾ ಮಂದಣ್ಣ ಅವರ ಸೆರೆನಿಟಿ ಹಾಲ್​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್​ಮೆಂಟ್ ನಡೀತು.

ರೀಲ್​ನಲ್ಲಿ ಮಿಂಚಿದ್ದ ಜೋಡಿ ಈಗ ರಿಯಲ್​ ಲೈಫ್​ನಲ್ಲಿ ಒಂದಾಗಿದ್ದಾರೆ. ಎರಡೂ ಕುಟುಂಬಸ್ಥರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು. ಕೊಡವ ಮತ್ತು ತುಳುನಾಡಿನ ಸಂಸ್ಕೃತಿ ಮಿಶ್ರಿತ ಎಂಗೇಜ್​ಮೆಂಟ್ ಅದ್ದೂರಿಯಾಗಿತ್ತು.

ಆಡಿ ಅಂಡ್ ಫೋರ್ಡ್ ಕಾರ್​ನಲ್ಲಿ ರಶ್ಮಿಕಾ ಪೀಚ್ ಕಲರ್​ನ ಗೌನ್​ ಧರಿಸಿ ಆಗಮಿಸಿದ್ರೆ, ರಕ್ಷಿತ್ ಶೆಟ್ಟಿ ಸೂಟ್ ಉಡುಗೆಯಲ್ಲಿ ಮಿರಮಿರನೆ ಮಿಂಚಿದ್ರು. ಆಮೇಲೆ ಕಲರ್​ಫುಲ್ ಸ್ಟೇಜ್​ನಲ್ಲಿ ವಜ್ರದ ಉಂಗುರ ಬದಲಿಸಿಕೊಂಡು ಇಬ್ಬರು ಸತಿ-ಪತಿ ಆಗ್ತಿದ್ದಾರೆ.ಇನ್ನು ವರ್ಣರಂಜಿತ ಎಂಗೇಜ್​ಮೆಂಟ್​ಗೆ ​ನಟ ವಿಜಯ್​ ರಾಘವೇಂದ್ರ, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಯಜ್ಞ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ಗಣ್ಯರು ಸಾಕ್ಷಿಯಾದರು.

ಎಂಗೇಜ್​ಮೆಂಟ್​ಗೆ ನೀತ್ ಮೇದಪ್ಪ ಡಿಸೈನ್ ಮಾಡಿದ್ದ ಸ್ಪೆಷಲ್ ಕೇಕ್​ ಎಲ್ಲರ ಗಮನ ಸೆಳೆಯಿತು. ಐದು ಸುತ್ತುಗಳ ಕೇಕ್ ಇದಾಗಿದ್ದು ಕೇಕ್ ಮೇಲೆ, ಹುಡುಗನೊಬ್ಬ ಹುಡುಗಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಎಲ್ಲರ ಕಣ್ಣು ಕುಕ್ಕಿತು.

ಇನ್ನು ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಅತಿಥಿಗಳಿಗೆ ವೆರೈಟಿ ವೆರೈಟಿ ತಿನಿಸು-ಭೋಜನ ರೆಡಿಯಾಗಿತ್ತು. ಮಂಗಳೂರು ಶೈಲಿಯ ಊಟ, ಚೈನೀಸ್ ಫುಡ್​ ಜೊತೆ ಕೂರ್ಗ್​​ ಸ್ಪೆಷಲಾಟಿ ಮಾಂಸಹಾರಗಳೂ ಗಮಗಮಿಸಿದ್ವು.. ಎಂಗೇಜ್​ಮೆಂಟ್ ಬಳಿಕ ಡಿಜೆ ಕಾರ್ಯಕ್ರಮ ಕೂಡ ನಡೀತು. ಒಟ್ಟಿನಲ್ಲಿ ಕೂರ್ಗ್​ನಲ್ಲಿ ಕರ್ಣ ಸಾನ್ವಿ ಎಂಗೇಜ್​ಮೆಂಟ್​ ನಡೆದಿದ್ದು ಎರಡು ವರ್ಷಗಳ ನಂತರ ಇಬ್ಬರು ಹಸೆಮಣೆ ಏರಲಿದ್ದಾರೆ.

--