ರಜನೀಕಾಂತ್ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡುವುದರೊಂದಿಗೆ ತಮಿಳುನಾಡು ರಾಜಕಾರಣದಲ್ಲಿ ಮೂರನೇ ಕನ್ನಡಿಗ ವ್ಯಕ್ತಿ ಧುಮುಕಿದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಮೂಲಕ ದರ್ಬಾರು ಮಾಡಿದ ಈವರೆಗಿನ ಕನ್ನಡಿಗರು ಎಂದರೆ ಪೆರಿಯಾರ್ ಹಾಗೂ ಜೆ. ಜಯಲಲಿತಾ.
ಚೆನ್ನೈ (ಜ.1): ರಜನೀಕಾಂತ್ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡುವುದರೊಂದಿಗೆ ತಮಿಳುನಾಡು ರಾಜಕಾರಣದಲ್ಲಿ ಮೂರನೇ ಕನ್ನಡಿಗ ವ್ಯಕ್ತಿ ಧುಮುಕಿದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಮೂಲಕ ದರ್ಬಾರು ಮಾಡಿದ ಈವರೆಗಿನ ಕನ್ನಡಿಗರು ಎಂದರೆ ಪೆರಿಯಾರ್ ಹಾಗೂ ಜೆ. ಜಯಲಲಿತಾ.
ಪೆರಿಯಾರ್: ಪೆರಿಯಾರ್ ಅವರು ದ್ರಾವಿಡ ಚಳವಳಿಯ ಪ್ರವರ್ತಕರು. ಇವರು ಜನಿಸಿದ್ದು ತಮಿಳುನಾಡಿನ ಈರೋಡ್‌ನಲ್ಲಾದರೂ ಇವರ ಕುಟುಂಬವು ಮೂಲತಃ ಕರ್ನಾಟಕದಿಂದ ಬಂದಿದ್ದಾಗಿತ್ತು. ಪೆರಿಯಾರ್ ಅವರ ಮೂಲ ನಾಮ ಇ.ವಿ.ರಾಮಸ್ವಾಮಿ. ಇವರ ತಂದೆ ಒಬ್ಬ ಶ್ರೀಮಂತ ಕನ್ನಡಿಗ ವ್ಯಾಪಾರಿಯಾಗಿದ್ದರು. ಪೆರಿಯಾರ್ ಅವರಿಗೆ ತಮಿಳು, ತೆಲುಗು ಜತೆ ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಬ್ರಾಹ್ಮಣಶಾಹಿ ವಿರೋಧಿ ದ್ರಾವಿಡ ಚಳವಳಿಯ ಹರಿಕಾರರಾಗಿ ಪೆರಿಯಾರ್ ಹೊರಹೊಮ್ಮಿದರು.
ಜಯಲಲಿತಾ: ಇನ್ನು ತಮಿಳ್ನಾಡು ರಾಜಕೀಯದಲ್ಲಿ ಛಾಪು ಮೂಡಿಸಿದ ಜಯಲಲಿತಾ ಕರ್ನಾಟಕದ ಮಂಡ್ಯ ಜಿಲ್ಲೆ ಮೇಲುಕೋಟೆ ಮೂಲದವರು. ರಜನೀಕಾಂತ್ ಅವರ ರೀತಿ ನಟರಾಗಿಯೇ ಇದ್ದುಕೊಂಡವರು. ನಂತರ ಎಂಜಿಆರ್ ಅವರ ಸಂಪರ್ಕಕ್ಕೆ ಬಂದು ರಾಜಕೀಯವನ್ನು ಕರಗತ ಮಾಡಿಕೊಂಡರು. ಎಂಜಿಆರ್ ಅವರ ನಿಧನದ ಬಳಿಕ ೫ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಅಣ್ಣಾ ಡಿಎಂಕೆ ಅಧಿನಾಯಕಿಯಾಗಿ ಕಾರ್ಯನಿರ್ವಹಿಸಿದರು.
ರಜನೀಕಾಂತ್: ಇದೀಗ ಕರ್ನಾಟಕ ಮೂಲದವರೇ ಆದ ರಜನೀಕಾಂತ್ ಅವರು ತಮಿಳುನಾಡು ರಾಜಕೀಯಕ್ಕೆ ಧುಮುಕಿರುವುದು ವಿಶೇಷವಾಗಿದೆ. 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಜನೀಕಾಂತ್ ಅವರ ಮೂಲ ನಾಮ ಶಿವಾಜಿರಾವ್ ಗಾಯಕವಾಡ್. ಬೆಂಗಳೂರಿನಲ್ಲ ಬಸ್ ಕಂಡಕ್ಟರ್ ಆಗಿದ್ದರು. ನಂತರ ಚೆನ್ನೈಗೆ ವಲಸೆ ಹೋದ ಅವರು ಶ್ರೇಷ್ಠ ತಮಿಳು ನಟರಾಗಿ ಹೊರಹೊಮ್ಮಿ ಜಯಲಲಿತಾ ಉತ್ತರಾಧಿಕಾರಿಯಾಗುವ ಇರಾದೆ ಹೊಂದಿದ್ದಾರೆ.
