ರಜಿನಿಕಾಂತ್ ತಮ್ಮ ಆಪ್ತ ಮಿತ್ರ ಅಂಬ​ರೀಶ್‌ ಅಂತಿಮ ದರ್ಶ​ನಕ್ಕೆ ಆಗ​ಮಿ​ಸಿದ್ದ ವೇಳೆ ಮಾಧ್ಯ​ಮ​ಗ​ಳೊಂದಿಗೆ ತಮ್ಮ ಹಾಗೂ ಅಂಬರೀಶ್ ನಡು​ವಿನ ನಲವತ್ತು ವರ್ಷಗಳ ಗೆಳೆತನ ಮೆಲಕು ಹಾಕಿದರು.

ಬೆಂಗಳೂತರು[ನ.26]: ಅಂಬರೀಷ್‌ರಂತಹ ನಾಯಕ ನಟ ಮತ್ತೆ ಸಿಗಬಹುದು. ಆದರೆ, ಅಂತಹ ವ್ಯಕ್ತಿ ಇನ್ನೊಬ್ಬ ಹುಟ್ಟಿಬರಲು ಸಾಧ್ಯವೇ ಇಲ್ಲ. ಬಯ್ಯುತ್ತಲೇ ಪ್ರೀತಿ ಹಂಚುತ್ತಿದ್ದ ಅವರು ಹಲವು ಬಾರಿ ‘ತಟ್ಟಿಬಿಡ್ತೇನೆ’ ಎಂದು ಗದರುತ್ತಿದ್ದರು. 

ಇತ್ತೀಚೆಗಷ್ಟೇ ದೂರವಾಣಿ ಕರೆ ಮಾಡಿ ‘‘ಬೆಂಗಳೂರಿಗೆ ಬಂದು ಮನೆಗೆ ಬಾರದೆ ಹೋಗಿದ್ದೀಯಾ? ಬಡ್ಡಿ ಮಗನೆ ಸಾಯಿಸಿ ಬಿಡ್ತೀನಿ ಎಂದಿದ್ದ’’.ಇಷ್ಟು​ಹೇ​ಳುವ ವೇಳೆಗೆ ಸೂಪರ್‌ಸ್ಟಾರ್‌ ತಲೈವಾ ರಜನಿಕಾಂತ್‌ ಭಾವು​ಕ​ರಾ​ದ​ರು.

ತಮ್ಮ ಆಪ್ತ ಮಿತ್ರ ಅಂಬ​ರೀಶ್ ಅಂತಿಮ ದರ್ಶ​ನಕ್ಕೆ ಆಗ​ಮಿ​ಸಿದ್ದ ವೇಳೆ ಮಾಧ್ಯ​ಮ​ಗ​ಳೊಂದಿಗೆ ತಮ್ಮ ಹಾಗೂ ಅಂಬರೀಷ್‌ ನಡು​ವಿನ ನಲವತ್ತು ವರ್ಷಗಳ ಗೆಳೆತನ ಮೆಲಕು ಹಾಕಿದರು.

ಇದನ್ನೂ ಓದಿ: ಕಾವೇರಿಗಾಗಿ ಮಂತ್ರಿ ಪದವಿ ತ್ಯಜಿಸಿದ್ದ ಅಂಬಿ

ಭಾವುಕ ರಜನಿ:

ಇದಕ್ಕೂ ಮುನ್ನ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿದ್ದ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಜನಿಕಾಂತ್‌ ಪಾರ್ಥೀವ ಅಂಬರೀಷ್‌ ಅವರನ್ನು ನೋಡುತ್ತಿದ್ದಂತೆ ಭಾವುಕರಾದರು. ಕಳೆದ 40 ವರ್ಷದ ಗೆಳೆತನ ನೆನಪಿಸಿಕೊಂಡು ಕಣ್ಣೀರು ಹಾಕಿದ ಅವರು, ಅರ್ಧ ಗಂಟೆಗೂ ಹೆಚ್ಚುಕಾಲ ಪಾರ್ಥಿವ ಶರೀರದ ಸಮೀಪವೇ ಮೌನವಾಗಿ ಕುಳಿತು ಸುಮಲತಾ ಅವರಿಗೆ ಸಂತೈಸಿದರು. ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಕುಳಿತಿದ್ದೆ​ಡೆಗೆ ಬಂದು ಒಂದು ಗಂಟೆಗೂ ಅಧಿಕ ಕಾಲ ಕುಳಿತಿದ್ದ​ರು.

ಇದನ್ನೂ ಓದಿ: ಸೋಲಿಲ್ಲದ ಸರದಾರನ ಮೊದಲ ಸೋಲು ಯಾವುದು..?

‘ಬಡ್ಡಿ ಮಗನೆ ಸಾಯಿಸಿ ಬಿಡ್ತೀನಿ’

ಕಣ್ಣೆದುರಿಗಿದ್ದ ಗೆಳೆಯನ ಪಾರ್ಥಿವ ಶರೀರ ಕಂಡು ದುಃಖಿತರಾಗಿದ್ದ ಅವರು, ‘ವಾರದ ಹಿಂದಷ್ಟೇ ಬೆಂಗಳೂರಿಗೆ ಬಂದು ಹೋಗಿದ್ದರೂ ತಮ್ಮ ಮನೆಗೆ ಬರಲಿಲ್ಲವೆಂದು ನನ್ನ ಮೇಲೆ ಅಂಬರೀಷ್‌ ಸಿಟ್ಟಾಗಿದ್ದ. ದೂರವಾಣಿ ಕರೆ ಮಾಡಿ ‘ಬಡ್ಡಿ ಮಗನೆ ಸಾಯಿಸಿ ಬಿಡ್ತೀನಿ’ ಎಂದು ತರಾಟೆಗೆ ತೆಗೆದುಕೊಂಡಿದ್ದ. ಇದೇ ಅಂಬರೀಷ್‌ ಗೆಳೆತನದ ಸ್ವರೂಪ. ಬಯ್ದು ಪ್ರೀತಿ ಹಂಚುವ ಗುಣ ಅವರದ್ದು. ಅವರ ಬಯ್ಗುಳದಲ್ಲಿ ಸಿಟ್ಟಿಗಿಂತ ಪ್ರೀತಿ ಇರುತ್ತಿತ್ತು’ ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ಅಂಬಿ ಸಾವಿಗೆ ವಿದೇಶದಲ್ಲೂ ಶ್ರದ್ಧಾಂಜಲಿ ;ಶೂಟಿಂಗ್ ನಿಲ್ಲಿಸಿದ ಚಿತ್ರ ತಂಡ

‘ನಾನು ಪ್ರತಿ ಬಾರಿ ಬೆಂಗಳೂರಿಗೆ ಬಂದಾಗಲೂ ಅವನ ಮನೆಗೆ ಹೋಗಿ ಊಟ ಮಾಡುತ್ತಿದ್ದೆ. ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಅವರ ಮನೆಗೆ ಹೋಗುವುದಕ್ಕೆ ಆಗಿರಲಿಲ್ಲ. ಬಳಿಕ ಫೋನ್‌ ಮಾಡಿ ಬೈದಿದ್ದ. ಒಳ್ಳೆ ಮನಸ್ಸು ಮತ್ತು ವ್ಯಕ್ತಿತ್ವಕ್ಕೆ ಅಂಬಿಗಿಂತ ಮತ್ತೊಂದು ಸಾಕ್ಷಿ ಇಲ್ಲ’ ಎಂದು ಹೇಳಿದ್ದಾರೆ.