ನವದೆಹಲಿ[ಜೂ. 07] ಮಹಾರಾಣಾ ಪ್ರತಾಪ್ ದಿನಾಚರಣೆ ಸಂದರ್ಭ ಮಾತನಾಡಿದ ಮದನ್ ಲಾಲ್, ಅಕ್ಬರ್ ಕೆಟ್ಟ ಕೆಲಸಗಳಿಗೆಂದೆ ಮೀನಾ ಬಜಾರ್ ಮಾಡಿಕೊಂಡಿದ್ದ. ಮೀನಾ ಬಜಾರ್ ನಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಪ್ರವೇಶವಿತ್ತು. ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುವ ಒಂದೇ ಕಾರಣಕ್ಕೆ ಸ್ತ್ರೀ ವೇಷ ಧರಿಸಿ ಮಿನಾ ಬಜಾರ್ ಗೆ ಅಕ್ಬರ್ ಬರುತ್ತಿದ್ದ ಎಂದು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಹೆಣ್ಣಿನ ಅಂದಕ್ಕೆ ಸವಾಲು ಹಾಕ್ತಿದ್ದ ಪ್ರಿನ್ಸ್ ಹರೀಶ್ ಸಾಧನೆ ಹಿಂದಿದೆ ನೋವಿನ ಕಥೆ

ಈ ಮಾರುಕಟ್ಟೆಗೆ ಬರುತ್ತಿದ್ದ ಅಕ್ಬರ್ ಮಹಿಳೆಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಬಿಕೇನಾರ್ ರಾಣಿ ಕಿರಣ್ ದೇವಿ ಅವರೊಂದಿಗೆ ಅಕ್ಬರ್ ಕೆಟ್ಟದಾಗಿ ನಡೆದುಕೊಳ್ಳಲು ಮುಂದಾದಾಗ ಆಕೆ ಎಚ್ಚರ ವಹಿಸಿ ಬಚಾವಾಗಿದ್ದಳು ಎಂದು ಉಲ್ಲೇಖ ಮಾಡಿದ್ದಾರೆ.

ಮಹಾರಾಣಾ ಪ್ರತಾಪ್ ಮತ್ತು ಅಕ್ಬರ್ ನನ್ನು ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುತ್ತ ತೆರಳಿದ ಮದನ್ ಲಾಲ್ ಈ ರೀತಿಯ ಹೇಳಿಕೆ ನೀಡಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.