ಆಂಧ್ರದಲ್ಲಿ ಆಲಿಕಲ್ಲು ಮಳೆ : ಅವಘಡದಿಂದ ಪಾರಾದ ಸಿಎಂ ನಾಯ್ಡು

First Published 1, Apr 2018, 7:31 AM IST
Rains disrupt normal life in Andhra Pradesh
Highlights

ರಾಮನವಮಿ ನಿಮಿತ್ತ ದೇವಾಲಯ ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಭಾರೀ ಆಲಿಕಲ್ಲು ಮಳೆ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿರುವ

ಹೈದರಾಬಾದ್: ರಾಮನವಮಿ ನಿಮಿತ್ತ ದೇವಾಲಯ ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಭಾರೀ ಆಲಿಕಲ್ಲು ಮಳೆ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿರುವ

ಘಟನೆ ಕಡಪಾ ಜಿಲ್ಲೆಯ ವೊಂಟಿಮಿಟ್ಟಾ ಎಂಬ ಗ್ರಾಮ ದಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ರಾಮನವಮಿ ಉತ್ಸವದ ನಿಮಿತ್ತ ಕೋದಂಡರಾಮ ದೇವಲಯದಲ್ಲಿ ಆಯೋಜಿಸಿದ್ದ ಶ್ರೀರಾಮ ಕಲ್ಯಾಣಂ ಕಾರ್ಯಕ್ರಮ ವೀಕ್ಷಿಸಲು ಸಹಸ್ರಾರು ಭಕ್ತರು ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ನೆರೆದಿದ್ದರು. ಈ ವೇಳೆ ಆಲಿಕಲ್ಲು ಮಳೆಯಿಂದ ತಾತ್ಕಾಲಿಕ ಶೆಡ್‌ಗಳು ಭಕ್ತರ ಮೇಲೆ ಕುಸಿದು, ಘಟನೆ ಸಂಭವಿಸಿದೆ.

loader