ರೈಲ್ವೆಯಲ್ಲಿನ್ನು ವಿಕಲಾಂಗ ಬದಲು ದಿವ್ಯಾಂಗ ಪದ ಬಳಕೆ

First Published 27, Jan 2018, 7:50 PM IST
Railways replaces viklang with divyang in concession forms
Highlights

ಅಂಗವಿಕಲರನ್ನು 'ದಿವ್ಯಾಂಗ'ರೆಂದು ಕರೆಯಬೇಕೆಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ ಎರಡು ವರ್ಷಗಳ ನಂತರ, ಇದೀಗ ರೈಲ್ವೆ ಸಚಿವಾಲಯ ಈ ಪದ ಬದಲಾವಣೆಗೆ ಮುಂದಾಗಿದೆ.

ಹೊಸದಿಲ್ಲಿ: ಅಂಗವಿಕಲರನ್ನು 'ದಿವ್ಯಾಂಗ'ರೆಂದು ಕರೆಯಬೇಕೆಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ ಎರಡು ವರ್ಷಗಳ ನಂತರ, ಇದೀಗ ರೈಲ್ವೆ ಸಚಿವಾಲಯ ಈ ಪದ ಬದಲಾವಣೆಗೆ ಮುಂದಾಗಿದೆ.

ಅಂಗ ವೈಕಲ್ಯ ಹೊಂದಿರುವವರಿಗೆ ನೀಡುವ ಅನುಮತಿ ಪತ್ರದಲ್ಲಿ 'ದಿವ್ಯಾಂಗ' ಎಂಬ ಪದವನ್ನು ಬಳಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿಶೇಷ ಸವಲತ್ತು ನೀಡುವವರಿಗೆ ಅಂಗವಿಕಲರು ಎಂಬ ಪದವನ್ನು ಬಳಸುವಲ್ಲಿ ಇನ್ನು ದಿವ್ಯಾಂಗರು ಎಂಬ ಪದ ಬಳಸಲಾಗುವುದು. ಈ ಬಗ್ಗೆ ಸಂಬಂಧಿಸಿದಂತೆ ಇಲಾಖೆಗೆ ಈಗಾಗಲೇ ರೈಲ್ವೆ ಸಚಿವಾಲಯ ಸೂಚಿಸಿದ್ದು, ಫೆಬ್ರವರಿ 1 ರಿಂದ ಈ ಆದೇಶ ಜಾರಿಗೆ ಬರಲಿದೆ.

ಭಾರತೀಯ ರೈಲ್ವೆಯು ವಿವಿಧ ವರ್ಗದ ಜನರಿಗೆ 53 ವಿನಾಯಿತಿಗಳನ್ನು ನೀಡುತ್ತಿದ್ದು, ಇದರಲ್ಲಿ ದಿವ್ಯಾಂಗರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ರಕ್ಷಣಾ ಸಿಬ್ಬಂದಿ ಸೇರಿದ್ದು, ವಾರ್ಷಿಕ 1,600 ಕೋಟಿ ವ್ಯಯಿಸುತ್ತದೆ.

ಮಾತು ಬಾರದ, ಶ್ರವಣ ದೋಷ ಹೊಂದಿರುವವರಿಗೆ ಸೆಕಂಡ್, ಸ್ಲೀಪರ್ ಮತ್ತು ಫಸ್ಟ್ ಕ್ಲಾಸ್ ಟಿಕೆಟ್‌ನಲ್ಲಿ ಶೇ.50 ರಿಯಾಯತಿ, ದೃಷ್ಟಿ ದೋಷವುಳ್ಳವರಿಗೆ ಸ್ಲೀಪರ್, ಫಸ್ಟ್ ಕ್ಲಾಸ್, ಏಸಿ ಚೇರ್ ಕಾರ್ ಮತ್ತು ಎಸಿ 3 ಟಯರ್‌ನಲ್ಲಿ ಶೇ.75 ರಿಯಾಯತಿ, ಇತರೆ ವೈಕಲ್ಯ ಹೊಂದಿರುವವರಿಗೆ ಸೆಕೆಂಡ್, ಸ್ಲೀಪರ್, ಫಸ್ಟ್ ಕ್ಲಾಸ್, ಏಸಿ ಚೇರ್ ಕಾರ್ ಮತ್ತು ಏಸಿ 3 ಟಯರ್‌ನಲ್ಲಿ ಶೇ.75 ಹಾಗೂ ಎಸಿ 2 ಟಯರ್ ಮತ್ತು ಎಸಿ ಫಸ್ಟ್ ಕ್ಲಾಸಿನಲ್ಲಿ ಶೇ.50 ರಿಯಾಯತಿ ದೊರೆಯಲಿದೆ.
 

loader