600 ರೈಲ್ವೆ ನಿಲ್ದಾಣಗಳು 99 ವರ್ಷ ಖಾಸಗಿಯವರಿಗೆ

First Published 21, Feb 2018, 8:29 AM IST
Railway Station Privatisation
Highlights

ನಷ್ಟದಲ್ಲಿದ್ದ ಭಾರತೀಯ ರೈಲ್ವೆ ಪುನರುತ್ಥಾನಕ್ಕಾಗಿ ನಾನಾ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ, ದೇಶದ ಪ್ರಮುಖ 600 ರೈಲು ನಿಲ್ದಾಣಗಳನ್ನು ಖಾಸಗಿ ಯವರಿಗೆ 99 ವರ್ಷ ಕಾಲ ಲೀಸ್ ಆಧಾರದಲ್ಲಿ ನೀಡುವ ಪ್ರಸ್ತಾಪ ಸಿದ್ಧ ಪಡಿಸಿದೆ.

ನವದೆಹಲಿ: ನಷ್ಟದಲ್ಲಿದ್ದ ಭಾರತೀಯ ರೈಲ್ವೆ ಪುನರುತ್ಥಾನಕ್ಕಾಗಿ ನಾನಾ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ, ದೇಶದ ಪ್ರಮುಖ 600 ರೈಲು ನಿಲ್ದಾಣಗಳನ್ನು ಖಾಸಗಿ ಯವರಿಗೆ 99 ವರ್ಷ ಕಾಲ ಲೀಸ್ ಆಧಾರದಲ್ಲಿ ನೀಡುವ ಪ್ರಸ್ತಾಪ ಸಿದ್ಧ ಪಡಿಸಿದೆ.

ಆದರೆ ಈ ಎಲ್ಲ ರೈಲು ನಿಲ್ದಾಣಗಳನ್ನು ಕೇವಲ ಏಕಾಂಗಿಯಾಗಿ ಅಭಿವೃದ್ಧಿ ಗೊಳಿಸದೇ ಖಾಸಗಿಯವರನ್ನೂ ಅದರಲ್ಲಿ ಒಳಗೊಳ್ಳುವಂತೆ ಮಾಡಲು ಇಲಾಖೆ ನಿರ್ಧಾರ ಮಾಡಿದೆ. ಈ ಪ್ರಕಾರ ರೈಲ್ವೆ ಇಲಾಖೆಯು ಆಧುನೀಕರಣದ ವೆಚ್ಚದಲ್ಲಿನ ಕೇವಲ ಶೇ.25ರಿಂದ 50 ಭಾಗ ಮಾತ್ರ ಭರಿಸಲಿದ್ದು, ಉಳಿದುದನ್ನು ಖಾಸಗಿ ಕಂಪನಿಗಳು ಭರಿಸಲಿವೆ.

loader