ಜ.28ಕ್ಕೆ ಪ್ರಧಾನಿ ಮೋದಿ ಮ್ ಕೀ ಬಾತ್ 3 ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್ ಗಾಂಧಿ
ಬೆಂಗಳೂರು: ಮುಂದಿನ ‘ಮನ್ ಕೀ ಬಾತ್’ಗೆ ಪ್ರಧಾನಿ ಮೋದಿ ಜನರಿಂದ ಸಲಹೆಗಳನ್ನು ಕೇಳಿದ್ದು, ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.
ಜ.28ಕ್ಕೆ ನಡೆಯಲಿರುವ ‘ಮನ್ ಕೀ ಬಾತ್’ಗೆ ನಿಮ್ಮ ಸಲಹೆ-ಸೂಚನೆಗಳೇನಿದ್ದರೂ ನನಗೆ ಕಳುಹಿಸಿ ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಯುವಜನರಿಗೆ ಯಾವಾಗ ಉದ್ಯೋಗ ಸಿಗುವುದು?, ಡೋಕ್ಲಾಮ್’ನಿಂದ ಚೀನಾವನ್ನು ಹಿಮ್ಮೆಟ್ಟಿಸುವುದು ಯಾವಾಗ? ಹಾಗೂ ಹರ್ಯಾಣದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಯಾವಾಗ ನಿಲ್ಲುತ್ತದೆ ಎಂಬ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಬೇಕೆಂದು ಕೇಳಿಕೊಂಡಿದ್ದಾರೆ.
