ಅನೇಕ ದಾರ್ಶನಿಕರು ಕರ್ನಾಟಕ ನಾಡು ಕಟ್ಟುವಲ್ಲಿ ಕೊಡುಗೆ ನೀಡಿದ್ದಾರೆ. ಅವರ ಪೈಕಿ, ಟಿಪ್ಪು ಸುಲ್ತಾನ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ. ವಿಶ್ವೇಶ್ವರಯ್ಯ, ಕುವೆಂಪು ಅವರೂ ಸೇರಿದ್ದಾರೆ ಎಂದು ಸ್ಮರಿಸಿದರು

ಕರ್ನಾಟಕದ ಬೆಳವಣಿಗೆಗೆ ಕೊಡುಗೆ ನೀಡಿದ ದಾರ್ಶನಿಕರ ಹೆಸರನ್ನು ಪ್ರಸ್ತಾಪಿಸುವಾಗ ರಾಹುಲ್‌ ಗಾಂಧಿ ಮತ್ತೊಮ್ಮೆ ಟಿಪ್ಪು ಸುಲ್ತಾನ್‌ ಹೆಸರು ಪ್ರಸ್ತಾಪಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಅನೇಕ ದಾರ್ಶನಿಕರು ಕರ್ನಾಟಕ ನಾಡು ಕಟ್ಟುವಲ್ಲಿ ಕೊಡುಗೆ ನೀಡಿದ್ದಾರೆ. ಅವರ ಪೈಕಿ, ಟಿಪ್ಪು ಸುಲ್ತಾನ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ. ವಿಶ್ವೇಶ್ವರಯ್ಯ, ಕುವೆಂಪು ಅವರೂ ಸೇರಿದ್ದಾರೆ ಎಂದು ಸ್ಮರಿಸಿದರು.

ಎನ್‌ಸಿಸಿ ಗೊತ್ತಿಲ್ಲಎಂದ ರಾಹುಲ್‌!

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂವಾದ ವೇಳೆ ವಿದ್ಯಾರ್ಥಿನಿಯೊಬ್ಬಳು ಎನ್‌ಸಿಸಿ ಕುರಿತಾಗಿ ಕೇಳಿದ ಪ್ರಶ್ನೆಗೆ ಎನ್‌ಸಿಸಿ ತರಬೇತಿ ಬಗ್ಗೆ ತಮಗೆ ಗೊತ್ತಿಲ್ಲ ಎಂದು ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಟೀಕೆ-ಚರ್ಚೆಗೆ ಗುರಿಯಾಗಿದೆ.