ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್

ನವದೆಹಲಿ/ಆನಂದ್: 22 ವರ್ಷಗಳಿಂದ ಗುಜರಾತ್ ಆಳುತ್ತಿರುವ ಬಿಜೆಪಿ ಸಾಧನೆ ಕುರಿತು ಈವರೆಗೆ 10 ಪ್ರಶ್ನೆಗಳನ್ನು ಕೇಳಿದ್ದೇನೆ. ಒಂದೇ ಒಂದಕ್ಕೂ ಬಿಜೆಪಿ ಉತ್ತರ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2 ದಶಕಗಳಿಂದ ಗುಜರಾತ್’ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಅಭಿವೃದ್ಧಿ ವಿಷಯವೇ ನಾಪತ್ತೆಯಾಗಿರುವುದು ಏಕೆ? ಗುಜರಾತ್‌ನಲ್ಲಿನ ಬಿಜೆಪಿ ಸಾಧನೆ ಕುರಿತಂತೆ 10 ಪ್ರಶ್ನೆಗಳನ್ನು ಕೇಳಿದೆ. ಅವರು ಒಂದಕ್ಕೂ ಉತ್ತರಿಸಲಿಲ್ಲ. ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾದ ಬಳಿಕವಷ್ಟೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಆಡಳಿತ ಎಂದರೆ ಕೇವಲ ಭಾಷಣ ಮಾತ್ರವೇ ಎಂದು ಅವರು ಟೀಕಿಸಿದ್ದಾರೆ.

ಮೋದಿ ಗಮನ ಬೇರೆಡೆ ಸೆಳೆವ ಜಾದುಗಾರನಿದ್ದಂತೆ ಎಂದೂ ಕುಟುಕಿದ್ದಾರೆ.