ರಾಹುಲ್‌ ಗಾಂಧಿ - ಅಮಿತ್ ಶಾ ರಾಜ್ಯ ಪ್ರವಾಸ

First Published 24, Feb 2018, 8:16 AM IST
Rahul Gandhi Visit Karnataka
Highlights

ಮುಂಬೈ ಕರ್ನಾಟಕದಲ್ಲಿ ಫೆ.24ರಿಂದ ಎಐಸಿಸಿ ಅಧಿನಾಯಕ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆ ಶುರುವಾಗುತ್ತಿದ್ದರೆ, ಹೈ- ಕದಲ್ಲಿರುವ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 25ರಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಂಚಾರ ಆರಂಭವಾಗಲಿದೆ.

ಕಲಬುರಗಿ : ಮುಂಬೈ ಕರ್ನಾಟಕದಲ್ಲಿ ಫೆ.24ರಿಂದ ಎಐಸಿಸಿ ಅಧಿನಾಯಕ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆ ಶುರುವಾಗುತ್ತಿದ್ದರೆ, ಹೈ- ಕದಲ್ಲಿರುವ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 25ರಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಂಚಾರ ಆರಂಭವಾಗಲಿದೆ.

24ರಂದು ದೆಹಲಿಯಿಂದ ವಿಮಾನದ ಮೂಲಕ ರಾತ್ರಿ 8ಕ್ಕೆ ಬೀದರಿಗೆ ಆಗಮಿಸಲಿರುವ ಅಮಿತ್‌ ಶಾ ಹಬ್ಸಿಕೋಟೆ ಅತಿಥಿ ಗೃಹದಲ್ಲಿ ತಂಗಲಿದ್ದಾರೆ. 25ರಂದು ಬೆ.9 ಕ್ಕೆ ನರಸಿಂಹಾ ಝರಾಕ್ಕೆ ಭೇಟಿ, 10.15 ಕ್ಕೆ ಮಂಗಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಬಸಲಿಂಗಪ್ಪ ರೆಡ್ಡಿಯವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಬೆ.11ಕ್ಕೆ ಹುಮನಾಬಾದಿನಲ್ಲಿ ಸಕ್ಕರೆ ಕಾರ್ಖಾನೆಯ ರೈತರೊಂದಿಗೆ ಸಂವಾದ ನಡೆಸುವರು. 12.40ಕ್ಕೆ ಸುರಪುರನಲ್ಲಿ ಹಮ್ಮಿಕೊಂಡ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಎಸ್ಸಿ ಸಮಾವೇಶದಲ್ಲಿ ಭಾಗಿ

ಅಲ್ಲಿಂದ ನೇರವಾಗಿ ಕಲಬುರಗಿ ನಗರಕ್ಕೆ ಆಗಮಿಸುವ ಅಮೀತ್‌ ಶಾ ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಮಧ್ಯಾಹ್ನ 2.00 ಕ್ಕೆ ಹಮ್ಮಿಕೊಂಡ ಪರಿಶಿಷ್ಟಜಾತಿ ಸಮುದಾಯದ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.15 ಕ್ಕೆ ಯಾನಾಗುಂದಿಯಲ್ಲಿ ಕೋಲಿ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6ಕ್ಕೆ ಶರಣಬಸವೇಶ್ವರ ಮಂದಿರಕ್ಕೆ ಭೇಟಿ ನೀಡಿದ ನಂತರ ರಾತ್ರಿ 7.45ಕ್ಕೆ ಪಿಡಿಎ ಎಂಜಿನೀಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿ ಕಲಬುರಗಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಮಳಖೇಡ ಉತ್ತರಾದಿ ಮಠಕ್ಕೆ ಬೇಟಿ

ಫೆ.26ರಂದು ಬೆ.9.25ಕ್ಕೆ ಮಳಖೇಡ ಉತ್ತರಾದಿಮಠಕ್ಕೆ ಶಾ ಭೇಟಿ ನೀಡಲಿದ್ದಾರೆ. ಸಮೀಪದಲ್ಲಿರುವ ಬುದ್ಧವಿಹಾರಕ್ಕೂ ಭೇಟಿ ನೀಡುವರು. 10.30ಕ್ಕೆ ಗ್ರ್ಯಾಂಡ್‌ ಹೋಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸುವರು. 10.50ಕ್ಕೆ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಗೋಲ್ಡ್‌ ಹಬ್‌ನಲ್ಲಿ ಸಂವಾದ ನಡೆಸಲಿದ್ದಾರೆ.

ಶಕ್ತಿಕೇಂದ್ರ ಭೇಟಿ- ಸಮಾವೇಶ

ಮಧ್ಯಾಹ್ನ 12 ಕ್ಕೆ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಹೆಲಿಕಾಪ್ಟರ್‌ನಲ್ಲಿ ಸೇಡಂ ತೆರಳುವರು. ಮಧ್ಯಾಹ್ನ 2.30 ಕ್ಕೆ ಸೇಡಂ ಪಟ್ಟಣದ ಮಾತೃಛಾಯಾ ಕಾಲೇಜಿನ ಆವರಣದಲ್ಲಿ ಸೇಡಂ ಮತ್ತು ಚಿತ್ತಾಪುರ ತಾಲೂಕಿನ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಸಂಜೆ 4.40 ಕ್ಕೆ ಅನುಭವ ಮಂಟಪದಲ್ಲಿ ಹಮ್ಮಿಕೊಂಡ ಸಮಾವೇಶದಲ್ಲಿ ಪಾಲ್ಗೊಳ್ಳುವರು. 5.45ಕ್ಕೆ ಹುಮನಾಬಾದಿನಲ್ಲಿ ನವಶಕ್ತಿ ಸಮಾವೇಶದ ನಂತರ ಸಾಯಂಕಾಲ 7.45 ಕ್ಕೆ ಗುರುದ್ವಾರ ಭೇಟಿ ನೀಡಲಿದ್ದಾರೆ. ರಾತ್ರಿ 8.25 ಕ್ಕೆ ಬೀದರ್‌ ವಿಮಾನ ನಿಲ್ದಾಣದಿಂದ ದೆಹಲಿ ತೆರಳಲಿದ್ದಾರೆ ಎಂದರು.

loader