ಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಸಂಘಟಿಸಲು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಭಾಗವಹಿಸುತ್ತಿಲ್ಲ. ನಾರ್ವೆಯ ವಿದೇಶಾಂಗ ಇಲಾಖೆಯ ಆಹ್ವಾನದ ಮೇರೆಗೆ ರಾಹುಲ್ ಗಾಂಧಿ ಇಂದು ನಾರ್ವೆಗೆ ತೆರಳುತ್ತಿದ್ದಾರೆ.

ನವದೆಹಲಿ: ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಸಂಘಟಿಸಲು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಭಾಗವಹಿಸುತ್ತಿಲ್ಲ.

ನಾರ್ವೆಯ ವಿದೇಶಾಂಗ ಇಲಾಖೆಯ ಆಹ್ವಾನದ ಮೇರೆಗೆ ರಾಹುಲ್ ಗಾಂಧಿ ಇಂದು ನಾರ್ವೆಗೆ ತೆರಳುತ್ತಿದ್ದಾರೆ.

ನಾರ್ವೆ ರಾಜಧಾನಿ ಓಸ್ಲೋ ನಗರದಲ್ಲಿ ರಾಜಕೀಯ ನಾಯಕರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ಕೂಟದಲ್ಲಿ ಅವರು ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಝಾದ್, ಪಕ್ಷವನ್ನು ಈ ರ‍್ಯಾಲಿಯಲ್ಲಿ ಪ್ರತಿನಿಧಿಸಲಿದ್ದಾರೆ.

ಲಾಲೂ ಯಾದವ್ ಭಾನುವಾರ (ಆ.27ರಂದು) ಪಾಟ್ನಾದಲ್ಲಿ ‘ಬಿಜೆಪಿ ಭಗಾವೋ, ದೇಶ್ ಬಚಾವೋ’ (ಬಿಜೆಪಿಯನ್ನು ಅಟ್ಟಿಸಿ, ದೇಶವನ್ನು ಉಳಿಸಿ) ಎಂಬ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದು, ಕಾಂಗ್ರೆಸ್, ಬಿಎಸ್ಪಿ ಮುಂತಾದ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿತ್ತು.

ಪ್ರತಿಪಕ್ಷಗಳ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿ ಸ್ಪಷ್ಟತೆ ಉಂಟಾಗುವವರೆಗೂ ತಾನು ಅಂತಹ ಸಭೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಬಿಎಸ್ಪಿ ನಾಯಕಿ ಮಾಯಾವತಿ ಈ ಹಿಂದೆ ಹೇಳಿದ್ದಾರೆ.