47 ವರ್ಷದ ರಾಹುಲ್ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನೆಹರು ಕುಟುಂಬದ 5ನೇ ಕುಡಿಯಾಗಿದ್ದಾರೆ

ನವದೆಹಲಿ(ಡಿ.11): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 60ನೇ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಹುಲ್ ನೇಮಕದ ಸುದ್ದಿಯನ್ನು ಎಐಸಿಸಿ ಚುನಾವಣಾ ಅಧಿಕಾರಿ ಮೂಲಾಪಲ್ ರಾಮಚಂದ್ರನ್ ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸ್ತುತ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರಿಂದ ಡಿಸೆಂಬರ್ 16ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 47 ವರ್ಷದ ರಾಹುಲ್ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನೆಹರು ಕುಟುಂಬದ 6ನೇ ಕುಡಿಯಾಗಿದ್ದಾರೆ. ಈ ಮೊದಲು ಮೋತಿಲಾಲ್ ನೆಹರು, ಜನಹರ್'ಲಾಲ್ ನೆಹರು, ಇಂದಿರಾ ಗಾಂಧಿ,ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಅಧ್ಯಕ್ಷರಾಗಿದ್ದರು.