‘ಐ ಆ್ಯಂ ಡನ್’ ಎಂದು ‘ಕೈ’ ಎತ್ತಿದ ರಾಹುಲ್ ಗಾಂಧಿ| ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಹಿಂಪಡೆಯಲು ಸ್ಪಷ್ಟ ನಕಾರ| ರಾಹುಲ್ ರಾಜೀನಾಮೆ ಸ್ವೀಕರಿಸವ ಅನಿವಾರ್ಯತೆಗೆ ಸಿಲುಕಿದ ಕಾಂಗ್ರೆಸ್| ವಾರದೊಳಗಾಗಿ ಕಾಂಗ್ರೆಸ್’ಗೆ ನೂತನ ಸಾರಥಿ| ಪಕ್ಷದ ಒತ್ತಡದ ನಡುವೆಯೂ ರಾಜೀನಾಮೆ ಹಿಂಪಡೆಯದ ರಾಹುಲ್| ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿ ‘ಕೈ’ ಅಧಿಪತಿ?|
ನವದೆಹಲಿ(ಜು.03): ಮಹತ್ವದ ಬೆಳವಣಿಗೆಯೊಂದರಲ್ಲಿ ಎಐಸಿಸಿ ಅಧ್ಯುಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಸ್ವೀಕರಿಸುವ ಅನಿವಾರ್ಯತೆಗೆ ಸಿಲುಕಿದೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್ ತನ್ನ ಹೊಸ ಅಧ್ಯಕ್ಷರನ್ನು ಆರಿಸಲಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಹುಲ್ ರಾಜೀನಾಮೆ ನೀಡದಂತೆ ಪಕ್ಷ ನಿರಂತರವಾಗಿ ಒತ್ತಡ ಹೇರುತ್ತಲೇ ಇತ್ತು
ಆದರೂ ಪಟ್ಟು ಸಡಿಲಿಸದ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಹುಲ್ ರಾಜೀನಾಮೆ ಸ್ವೀಕರಿಸುವ ನಿರ್ಧಾರಕ್ಕೆ ಕೈ ನಾಯಕರು ಬಂದಿದ್ದಾರೆ.
ಇನ್ನು ಒಂದು ವಾರದೊಳಗಾಗಿ ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದ್ದು, ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆರಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
