ಮೋದಿ ಫೋನ್‌ ‘ಮೇಡ್‌ ಇನ್‌ ಚೀನಾ’

Rahul Gandhi attacks PM Modi, says his phone is 'Made in China
Highlights

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ‘ಮೇಕ್‌ ಇನ್‌ ಇಂಡಿಯಾ’ ಕರೆ ನೀಡುತ್ತಿದ್ದರೆ, ಅವರು ಹೊಂದಿರುವ ಫೋನ್‌ ‘ಮೇಡ್‌ ಇನ್‌ ಚೀನಾ’ ಆಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

ಮಂಡಸೌರ್‌: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ‘ಮೇಕ್‌ ಇನ್‌ ಇಂಡಿಯಾ’ (ಭಾರತದಲ್ಲೇ ಉತ್ಪಾದಿಸಿ) ಕರೆ ನೀಡುತ್ತಿದ್ದರೆ, ಅವರು ಹೊಂದಿರುವ ಫೋನ್‌ ‘ಮೇಡ್‌ ಇನ್‌ ಚೀನಾ’ ಆಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ. 

ರಾಜ್ಯದ ಮಂಡಸೌರ್‌ನಲ್ಲಿ ಕಳೆದ ವರ್ಷ ಜೂನ್‌ 6ರಂದು ನಡೆದ ರೈತ ಪ್ರತಿಭಟನೆ ವೇಳೆ ಗೋಲಿಬಾರ್‌ ಸಂಭವಿಸಿ 6 ರೈತರು ಪ್ರಾಣ ಕಳೆದುಕೊಂಡಿದ್ದರು. ಇದರ ಮೊದಲ ವರ್ಷಾಚರಣೆ ನಿಮಿತ್ತ ಇಲ್ಲಿ ಬೃಹತ್‌ ರೈತ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಮೋದಿ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಏನು ಮಾಡಿದರು? ಮೇಕ್‌ ಇನ್‌ ಇಂಡಿಯಾ ಗತಿ ಏನಾಯಿತು? ಮೋದಿ ಅವರ ಫೋನನ್ನೇ ನೋಡಿ.

ಅದು ಮೇಡ್‌ ಇನ್‌ ಚೀನಾ’ ಎಂದು ವ್ಯಂಗ್ಯವಾಡಿದರು. ‘ಕಾಂಗ್ರೆಸ್‌ಗೆ ಅಧಿಕಾರ ಕೊಡಿ. ಇನ್ನು 5 ಅಥವಾ 7 ವರ್ಷ ಬಿಟ್ಟು ಬರುವೆ. ಆಗ ಮೇಡ್‌ ಇನ್‌ ಮಂಡಸೌರ್‌ ಉತ್ಪನ್ನಗಳು ಉತ್ಪಾದನೆ ಆಗುತ್ತಿರುತ್ತವೆ’ ಎಂಬ ದೊಡ್ಡ ಭರವಸೆಯನ್ನು ರಾಹುಲ್‌ ನೀಡಿದರು.

loader