ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್​ ನಾಡಿನ ಸಮಸ್ತರ ಸಾಮರಸ್ಯಕ್ಕೆ ಕಾರಣವಾಗಬೇಕು. ಹಿಂದೂ, ಜೈನ್​, ಸಿಖ್​, ಮುಸಲ್ಮಾನ, ಕ್ರೈಸ್ತರಾದ ನಾವೆಲ್ಲರೂ ಭಾರತ ಮಾತೆ ಮಡಿಲಿನ ಮಕ್ಕಳು ಎಂದು ರಾಮಚಂದ್ರಾಪುರ ಮಠದ ಶ್ರೀಗಳು ಹೇಳಿದ್ದಾರೆ.

ಬೆಂಗಳೂರು(ಸೆ.02): ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್​ ನಾಡಿನ ಸಮಸ್ತರ ಸಾಮರಸ್ಯಕ್ಕೆ ಕಾರಣವಾಗಬೇಕು. ಹಿಂದೂ, ಜೈನ್​, ಸಿಖ್​, ಮುಸಲ್ಮಾನ, ಕ್ರೈಸ್ತರಾದ ನಾವೆಲ್ಲರೂ ಭಾರತ ಮಾತೆ ಮಡಿಲಿನ ಮಕ್ಕಳು ಎಂದು ರಾಮಚಂದ್ರಾಪುರ ಮಠದ ಶ್ರೀಗಳು ಹೇಳಿದ್ದಾರೆ.

ಬಕ್ರೀದ್​ ನಲ್ಲಿ ನಡೆಯಬಹುದಾದ ಗೋ ಹತ್ಯೆಯು ಹೀಮದೂ- ಜೈನ್​ - ಸಿಖ್ಖರ ಧರ್ಮಪ್ರಜ್ಱಗೆ ಅಘಾತ ಮಾಡುವುದರ ಮೂಲಕ ಸಾಮರಸ್ಯಕ್ಕೆ ಸವಾಲಾಗಬಾರದು. ಬಕ್ರೀದ್​ ಹಬ್ಬದಲ್ಲಿ ಗೋ ಹತ್ಯೆ ಮಾಡದಿರುವ ಮುಸಲ್ಮಾನರ ಒಂದೇ ಒಂದು ನಿರ್ಧಾರ ಶಾಂತಿಯ ಕ್ರಾಂತಿಯನ್ನೇ ಉಂಟು ಮಾಡಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋವುಗಳನ್ನು ಕೊಳ್ಳುವಾಗ ನೀಡಿದ ಹಣಕ್ಕೆ ಏನು ಗತಿ? ಎಂಬ ನಿಮ್ಮ ಚಿಂತೆಯನ್ನು ನಾವು ಬಲ್ಲೆವು. ಬಲಿ ನೀಡುವುದರ ಬದಲು ದೇಶಿ ಗೋವುಗಳನ್ನು ಮಠಕ್ಕೆ ನೀಡುವುದಾದರೆ ಯೋಗ್ಯ ಮೌಲ್ಯವನ್ನು ನೀಡಿ ಪಡೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಗೋವಿಂದ ಬಲಿ ಕೈಬಿಡಿ, ವಿಶ್ವಕ್ಕೆ ಮಾದರಿಯಾಗಬಲ್ಲ ಸಹಬಾಳ್ವೆಗೆ ನಾಂದಿ ಹಾಡಿರಿ ಎಂದು ತಿಳಿಸಿದ್ದಾರೆ.