Asianet Suvarna News Asianet Suvarna News

ಕೇಂದ್ರ ಸಚಿವರು ರಸ್ತೆಯಲ್ಲಿಯೇ ಮೂತ್ರ ವಿಸರ್ಜಿಸಿದರೆ ?

ಇಂತಹದೊಂದು ಭಾವಚಿತ್ರ ಸುದ್ದಿಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

RadhaMohan singh Gossip News
  • Facebook
  • Twitter
  • Whatsapp

ನವದೆಹಲಿ(ಜೂ.28): ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನಕ್ಕೆ ಕೊಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಇದಕ್ಕಾಗಿ ದೇಶದಲ್ಲಡೆ ದೊಡ್ಡಮಟ್ಟದಲ್ಲಿ ಅಭಿಯಾನ, ಪ್ರಚಾರ ಹಮ್ಮಿಕೊಳ್ಲೂತ್ತಿದೆ. ಆದರೆ ಮೋದಿ ಸರ್ಕಾರದ ಭಾಗವೆ ಆಗಿರುವ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ರಸ್ತೆಯಲ್ಲಿ ಮೂತ್ರ ವಿಸರ್ಜಿಸಿರುವ ಚಿತ್ರ ಎಲ್ಲಡೆ ಹರಿದಾಡುತ್ತಿದೆ.ಇಂತಹದೊಂದು ಭಾವಚಿತ್ರ ಸುದ್ದಿಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೇಂದ್ರ ಸಚಿವರು ಮೂತ್ರ ವಿಸರ್ಜಿಸುತ್ತಿರುವುದು ಬೆಂಗಾವಲು ಪಡೆ ಅವರಿಗಾಗಿ ಕಾವಲು ಕಾಯುತ್ತಿರುವ ಚಿತ್ರ ಫೇಸ್'ಬುಕ್ ಟ್ವಿಟರ್'ಗಳ ಮೂಲಕ ಪಸರಿಸುತ್ತಿದೆ. ಆದರೆ ಇದು ಅವರೆ ಎಂಬುದು ಸ್ಪಷ್ಟವಾಗಿಲ್ಲ. ಅವರೆ ಆಗಿರುವುದಕ್ಕೆ ಸ್ಪಷ್ಟ ಕಿರುಹುಗಳಿಲ್ಲದ ಕಾರಣ ಬಹುಶಃ ಇದು ಗಾಳಿಸುದ್ದಿ ಆಗಿರುವ ಸಾಧ್ಯತೆಯಿದೆ.

(Gossip News)   

Follow Us:
Download App:
  • android
  • ios