Asianet Suvarna News Asianet Suvarna News

ಈಶ್ವರಪ್ಪನವರು ಈ ರೀತಿ ಮಾಡಬಾರದಿತ್ತು : ಅಮಿತ್ ಷಾ ಗಮನಿಸುತ್ತಿದ್ದಾರೆ

ಈಶ್ವರಪ್ಪನವರು ರೀತಿ ಮಾಡಬಾರದಿತ್ತು. ಏನದ್ರೂ ಸಮಸ್ಯೆ ಇದ್ದರೆ ಪಕ್ಷದ ಒಳಗೆ ತೀರ್ಮಾನ ಮಾಡಬೇಕು. ಅದು ಬಿಟ್ಟು ಮಾಧ್ಯಮಕ್ಕೆ ಬಂದು ಪಕ್ಷಕ್ಕೆ ಮುಜುಗರ ತರಬಾರದು.

R Ashok Blame KSE
  • Facebook
  • Twitter
  • Whatsapp

ಬೆಂಗಳೂರು(ಏ.27): ಬಿಜೆಪಿಯಲ್ಲಿ ಅತೃಪ್ತರ ಸಮಾವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಈಶ್ವರಪ್ಪ ಅವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅದಕ್ಕೆ ವಿರೋಧವಿದೆ. ಈಶ್ವರಪ್ಪನವರು ಈ ರೀತಿ ಮಾಡಬಾರದಿತ್ತು. ಏನದ್ರೂ ಸಮಸ್ಯೆ ಇದ್ದರೆ ಪಕ್ಷದ ಒಳಗೆ ತೀರ್ಮಾನ ಮಾಡಬೇಕು. ಅದು ಬಿಟ್ಟು ಮಾಧ್ಯಮಕ್ಕೆ ಬಂದು ಪಕ್ಷಕ್ಕೆ ಮುಜುಗರ ತರಬಾರದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಲ್ಲಾ ಗಮನಿಸುತ್ತಿದ್ದಾರೆ.ಪಕ್ಷವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿ ಆಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು' ಆರ್ ಅಶೋಕ್ ಹೇಳಿಕೆನೀಡಿದ್ದಾರೆ.

Follow Us:
Download App:
  • android
  • ios