ಕೊಲ್ಲಿ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸುವಂತೆ ಕತರ್ ದೇಶವು ಪಾಕಿಸ್ತಾನದ ಮೊರೆ ಹೋಗಿದೆ. ಕತರ್ ಹಾಗೂ ಇತರ ಕೊಲ್ಲಿ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ರಚನಾತ್ಮಕ ಪಾತ್ರ ವಹಿಸಬೇಕೆಂದು ಪಾಕಿಸ್ತಾನ ಪ್ರಧಾನಿ ನವಾಝ ಶರೀಫ್’ರನ್ನು ಭೇಟಿಯಾದ ಕತರ್ ವಿದೇಶಾಂಗ ಸಚಿವ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಮನವಿ ಮಾಡಿದ್ದಾರೆ.

ಇಸ್ಲಾಮಾಬಾದ್: ಕೊಲ್ಲಿ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸುವಂತೆ ಕತರ್ ದೇಶವು ಪಾಕಿಸ್ತಾನದ ಮೊರೆ ಹೋಗಿದೆ.

ಕತರ್ ಹಾಗೂ ಇತರ ಕೊಲ್ಲಿ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ರಚನಾತ್ಮಕ ಪಾತ್ರ ವಹಿಸಬೇಕೆಂದು ಪಾಕಿಸ್ತಾನ ಪ್ರಧಾನಿ ನವಾಝ ಶರೀಫ್’ರನ್ನು ಭೇಟಿಯಾದ ಕತರ್ ವಿದೇಶಾಂಗ ಸಚಿವ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಮನವಿ ಮಾಡಿದ್ದಾರೆ.

ಕತರ್ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನು ಒದಗಿಸುತ್ತಿದೆ ಎಂದು ಆರೋಪಿಸಿ ಕೊಲ್ಲಿ ದೇಶಗಳಾದ ಸೌದಿ, ಬಹರೈನ್, ಯುಏಇ, ಹಾಗೂ ಈಜಿಪ್ಟ್, ಕತಾರ್’ನೊಂದಿಗೆ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿವೆ. ಆದರೆ ಕತಾರ್ ಆರೊಪಗಳನ್ನು ನಿರಾಕರಿಸಿದೆ.

ಬಿಕ್ಕಟ್ಟನ್ನು ಸೌಹಾರ್ದಾಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಪ್ರಯತ್ನಿಸುವುದು ಎಂದು ಪ್ರಧಾನಿ ನವಾಝ ಶರೀಫ್ ಭರವಸೆ ನೀಡಿದ್ದಾರೆ.