ನವದೆಹಲಿ(ಆ. 16) ಪಂಜಾಬ್ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ. ದೆಹಲಿಯ ಕೆಂಪು ಕೋಟೆ ಮೇಲೆ ರಾಹುಲ್ ಗಾಂಧಿ ಸದ್ಯದಲ್ಲಿಯೇ ಭಾರತದ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ  ಎಂದು ಹೇಳಿದ್ದ ಹಳೆಯ ಭಾಷಣ ಟ್ರೋಲ್ ಗೆ ಕಾರಣವಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಗಳಿಸಿದ ನಂತರ  ಡಿಸೆಂಬರ್ 13, 2018 ರಂದು ಮಾಡಿದ್ದ ಭಾಷಣ  ಟ್ರೋಲ್ ಗೆ ಕಾರಣವಾಗಿದೆ. 

ಕಚೇರಿಗೆ ಬರದಿದ್ದರೂ ಸಿಧುಗೆ ಸಲ್ಲುತ್ತೆ ಸಂಬಳ, ಗೂಟದ ಕಾರಿಗೂ ಮೋಸವಿಲ್ಲ!

'ಕಾಂಗ್ರೆಸ್ ಇಂಥ ದಿಗ್ವಿಜಯ ಸಾಧಿಸಿದೆ. ನಾನಗೆ ನಂಬಿಕೆಯಿದೆ ರಾಹುಲ್ ಗಾಂಧಿ ದೆಹಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ರಾಹುಲ್ ಗಾಂಧಿ ಬಡವರ, ದಲಿತರ ಪರ ಕೆಲಸ ಮಾಡುತ್ತಿದ್ದಾರೆ.  ಇದೇ ಕಾರಣಕ್ಕೆ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ರಾಜ್ಯಗಳಲ್ಲಿ ವಿಜಯ ಸಿಕ್ಕಿದೆ' ಎಂದು ಹೇಳಿದ್ದರು.