ಪಾಕ್ ಮೇಲೆ ಬಾಂಬ್ ದಾಳಿ - ಕಾರವಾರ ನೌಕಾನೆಲೆಯಲ್ಲಿ ಹೈ-ಅಲರ್ಟ್!

ಪಾಕಿಸ್ತಾನ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ ಹಾಗೂ ಪ್ರಮುಖ ವೈಮಾನಿಕ ವಾಯುನೆಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಇದೀಗ ಕರ್ನಾಟಕದ ಕಾರವಾರದಲ್ಲಿರುವ ನೌಕಾನೆಲೆಯಲ್ಲೂ ಹೈ-ಅಲರ್ಟ್ ಘೋಷಿಸಲಾಗಿದೆ.
 

Pulwana revenge High alert in karwar INS naval base after India Air force bomb attack

ಕಾರವಾರ(ಫೆ.26): ಪಾಕಿಸ್ತಾನ ಉಗ್ರ ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. 10 ಉಗ್ರರ ಕ್ಯಾಂಪ್‌ಗಳನ್ನ ಧ್ವಂಸಗೊಳಿಸಿದ ಬೆನ್ನಲ್ಲೇ, ಭಾರತೀಯ ಗಡಿ ನಿಯಂತ್ರಣ ರೇಖೆಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಇದೀಗ ಕಾರವಾರದಲ್ಲಿರುವ INS ಕದಂಬ ನೌಕಾನೆಲೆಯಲ್ಲಿ ಕೂಡ ಹೈ-ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಪುಲ್ವಾಮ ದಾಳಿಯ JEM ಉಗ್ರರ ಕ್ಯಾಂಪ್ ಧ್ವಂಸ - ಯುದ್ಧ ಆರಂಭ!

ಇಂದು ಬೆಳಗಿನ ಜಾವ(ಫೆ.26) ಭಾರತೀಯ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್, ಮುಜಾಫರಾಬಾದ್, ಚಾಕೋಟಿಗೆ ನುಗ್ಗಿದ ಭಾರತೀಯ ವಾಯುಸೇನೆ ಉಗ್ರರ ಕ್ಯಾಂಪ್‌ಗಳನ್ನ ನೆಲೆಸಮಗೊಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ.

ಇದನ್ನೂ ಓದಿ: ಭಾರತ ದಾಳಿ ಮಾಡ್ತಿದೆ ಎಂದು ಬಾಯಿ ಬಡ್ಕೊಂಡ ಪಾಕ್!

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್- ಎ -ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಆದಿಲ್ ದಾರ್ , ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ. ಈ ದಾಳಿಯಿಂದ 44 CRPF ಯೋಧರು ಹುತಾತ್ಮರಾಗಿದ್ದರು. ಸದ್ಯ ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ

Latest Videos
Follow Us:
Download App:
  • android
  • ios