ಜಮ್ಮು ಮತ್ತು ಕಾಶ್ಮೀರ(ಫೆ.26): ಪುಲ್ವಾಮಾ ದಾಳಿ ರೂವಾರಿ ಜೈಶ್-ಇ-ಮೊಹಮ್ಮದ್ ಸಂಘಟನೆ ಕ್ಯಾಂಪ್‌ಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ. 1975ರ ಬಳಿಕ ಇದೇ ಮೊದಲ ಬಾರಿಗೆ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ ದಾಟಿದ ಭಾರತೀಯ ವಾಯು ಸೇನೆ ಪಾಕ್ ಉಗ್ರರ ಅಡಗು ತಾಣಗಳನ್ನ ಧ್ವಂಸಗೊಳಿಸಿದೆ.

ಇದನ್ನೂ ಓದಿ: ಪುಲ್ವಾಮಾ ಸೇಡು ತೀರಿಸಿದ ಭಾರತ: LOC ದಾಟಿದ ವಾಯುಸೇನೆಯಿಂದ ಉಗ್ರರ ಕ್ಯಾಂಪ್ ಉಡೀಸ್!

ಬರೋಬ್ಬರಿ 1000 ಕೆ.ಜಿ ತೂಕದ  ಬಾಂಬ್‌ಗಳನ್ನ 10 ಉಗ್ರರ ಕ್ಯಾಂಪ್ ಮೇಲೆ ಹಾಕಿರುವ ವಾಯುಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. 12 ಮೀರಾಜ್ ಜೆಟ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಾಯು ಸೇನೆ, ಪಾಕಿಸ್ತಾನದ ರೇಡಾರ್ ಕಣ್ತಪ್ಪಿಸಿ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ಹಾಕಿದೆ.

ಇದನ್ನೂ ಓದಿ: ಒಂದೇ ಒಂದು ಅವಕಾಶ ಕೊಡಿ ಎಂದು ಭಾರತದ ಕಾಲಿಗೆ ಬಿದ್ದ ಪಾಕ್ ಪ್ರಧಾನಿ

ರ್ಯಾಪಿಡ್ ಸೀಕ್ ಹಾಗೂ ಡೆಸ್ಟ್ರಾಯ್ ಮಿಶನ್ ಕಾರ್ಯಚರಣೆ ಹೆಸರಿನಲ್ಲಿ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್, ಮುಜಾಫರಾಬಾದ್, ಚಾಕೋಟಿಯಲ್ಲಿ ದಾಳಿ ಸಂಘಟಿಸಿದ ವಾಯು ಸೇನೆ,ಜೈಷ್-ಎ-ಮೊಹಮದ್ ಉಗ್ರ ಸಂಘಟನೆಯ 10  ಅಡಗುದಾಣ, ಲಾಂಚ್ ಪ್ಯಾಡ್‌ಗಳು ಉಡೀಸ್ ಆಗಿದೆ.  ಇಷ್ಟೇ ಅಲ್ಲ ಉಗ್ರರ 3 ಕಂಟ್ರೋಲ್ ರೂಂ ಕೂಡ ಧ್ವಂಸಗೊಂಡಿದೆ. ಇದೀಗ ಯುದ್ಧದ ವಾತಾವರಣ ನಿರ್ಮಾಣಗೊಂಡಿದೆ. ಇಷ್ಟೇ ಅಲ್ಲ ಪಾಕಿಸ್ತಾನದ ಪ್ರತಿದಾಳಿಗೆ ಭಾರತೀಯ ಸೇನೆ ಸಂಪೂರ್ಣ ಸಜ್ಜಾಗಿದೆ.