ಶ್ರೀನಗರ, [ಫೆ14]: ಫೆಬ್ರವರಿ 14, 2019 ಈ ದಿನವನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಯಾಕಂದ್ರೆ ಫೆ.14 ರಂದು  ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು.

ಉಗ್ರರ ಈ ರಣಹೇಡಿ ದಾಳಿಗೆ ನಮ್ಮ ಭಾರತದ 44 ಧೀರಯೋಧರು ಹುತಾತ್ಮರಾಗಿದ್ದಾರೆ. ಹೆಚ್ಚಿನ ಯೋಧರ ದೇಹಗಳು ಛಿದ್ರ ಛಿದ್ರವಾಗಿದ್ದು ಗುರುತು ಪತ್ತೆ ಮಾಡುವುದೇ ಕಷ್ಟವಾಗಿತ್ತು. ಅಷ್ಟು ಭಯಾನಂಕ ದಾಳಿಯಾಗಿದೆ.

ಫೋನಿನಲ್ಲೇ ಸಾವಿನ ಸದ್ದು ಕೇಳಿಸಿಕೊಂಡ ಹುತಾತ್ಮ ಯೋಧನ ಪತ್ನಿ

ಆದ್ರೆ ಅಲ್ಲಿ ಹರಿದ ಯೊಧರ ನೆತ್ತರು ಭಾರತ ನಕಾಶೆಯಾಗಿ ಮಾರ್ಪಟಿದೆ. ಭಾರತ ಭೂಪಟದಂತೆ ನೆತ್ತರು ಚೆಲ್ಲಿದ್ದು,  ಈ ಪೋಟೋವನ್ನು ತಲೆಕೆಳಗಾಗಿ ಮಾಡಿ ನೋಡಿದ್ರೆ ಥೇಟ್ ಭಾರತ ನಕಾಶೆಯ ರೀತಿಯಲ್ಲಿ ಕಾಣುತ್ತೆ. ಈ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಹಳ ಸ್ಪಷ್ಟವಾಗಿ ರಕ್ತದಲ್ಲಿ ಮೂಡಿದೆ.

ಯೋಧರು ತಮ್ಮ ರಕ್ತದಲ್ಲಿ ಭಾರತ ನಕಾಶೆ ಬಿಡಿಸಿ ಪ್ರಾಣ ತ್ಯಾಗ ಮಾಡಿದ್ದಾರೆ ಅಂತೆಲ್ಲ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.