Asianet Suvarna News Asianet Suvarna News

ಯೋಧರಿಗೆ ನಮನ ಸಲ್ಲಿಸುವಾಗಲೆ ಹಾವೇರಿಯಲ್ಲಿ ಪಾಕ್ ಪರ ಘೋಷಣೆ!

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ಉಗ್ರ ದಾಳಿ ನಡೆದು ಭಾರತೀಯ ಸೇನೆಯ ಯೋಧರು ಹುತಾತ್ಮರಾದ ಸಂಗತಿ ಇಡೀ ದೇಶವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.  ಆದರೆ ರಾಯಚೂರಿನಲ್ಲಿ ಯುವಕರ ಗುಂಪೊಂದು ಈ ಘಟನೆಯನ್ನು ಸಂಭ್ರಮಿಸಿತ್ತು. ಈಗ ಹಾವೇರಿಯಲ್ಲಿಯೂ ಇಂಥದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

pulwama-terror-attack Haveri Youth celebrate with Pakistan Slogan
Author
Bengaluru, First Published Feb 16, 2019, 5:05 PM IST

ಹಾವೇರಿ[ಫೆ.16]  ರಾಯಚೂರಿನ ಮಸ್ಕಿ ತಾಲೂಕಿನ ತಲೆಖಾನ್ ಗ್ರಾಮದಲ್ಲಿ ಫೆ. 15ರ ತಡರಾತ್ರಿ 15ಕ್ಕೂ ಹೆಚ್ಚು ಯುವಕರು ಹಸಿರು ಬಣ್ಣ ಎರಚಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಸುದ್ದಿಯಾಗಿತ್ತು.

ಇದೀಗ  ಹಾವೇರಿಯ ದೇವಗಿರಿಯಲ್ಲಿ ಪಾಕ್ ಪರ ಘೋಷಣೆ ಕೇಳಿ ಬಂದಿದೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇಂಥ ಪ್ರಕರಣ ನಡೆದಿದ್ದು ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸುವ ವೇಳೆ ಪಾಕ್ ಪರ ಘೋಷಣೆ ಕೇಳಿಬಂದಿದೆ.

ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

ಒಂದು ಕೋಮಿನ ಯುವಕ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಘೋಷಣೆ ಕೂಗಿದ ಯುವಕನನ್ನು ಗ್ರಾಮಸ್ಥರು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು  ವೇರಿ ಪೊಲೀಸರು ಗ್ರಾಮಕ್ಕೆ ಭೇಟಿ, ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

Follow Us:
Download App:
  • android
  • ios