Asianet Suvarna News Asianet Suvarna News

ಶೀಘ್ರವೇ ರಾಜ್ಯದ ಶಾಲಾ ಪಠ್ಯದಲ್ಲಿ ಐವರು ಪುಲ್ವಾಮ ಹುತಾತ್ಮರು

ಪುಲ್ವಾಮದಲ್ಲಿ ನಡೆದ ಜೈಶ್ ಇ ಮೊಹಮ್ಮದ್ ಸಂಘಟನೆ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಇದರಲ್ಲಿ ಐವರು ರಾಜಸ್ಥಾನಿಗಳಾಗಿದ್ದಾರೆ. ಈ ಐವರ ಬಲಿದಾನದ ಬಗ್ಗೆ ರಾಜ್ಯಪಠ್ಯದಲ್ಲಿ ಸೇರ್ಪಡೆಗೊಳಿಸಲು ಇಲ್ಲಿನ ಸರ್ಕಾರ ತೀರ್ಮಾನಿಸಿದೆ. 

Pulwama CRPF martyrs may find mention in Rajasthan textbooks
Author
Bengaluru, First Published Feb 18, 2019, 1:16 PM IST

ಜೈಪುರ : ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು,  ಇದರಲ್ಲಿ ರಾಜಸ್ಥಾನದ ಐವರು ಯೋಧರು ವೀರಮರಣವನ್ನಪ್ಪಿದ್ದರು. 

ಈ ಐವರು ಯೋಧರ ಬಗ್ಗೆ ಪಠ್ಯದಲ್ಲಿ ಶೀಘ್ರ ಸೇರಿಸುವುದಾಗಿ  ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಾಸ್ತ್ರ ಹೇಳಿದ್ದಾರೆ. ಈ ಬಗ್ಗೆ ಪಠ್ಯಪುಸ್ತಕ ಸಮಿತಿಗೂ ಸಚಿವರು ಸೂಚನೆ ನೀಡಿದ್ದಾರೆ.  ಶೀಘ್ರವೇ ಮಕ್ಕಳ ಕೈಗೆ ಈ ಪಠ್ಯ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ. 

ರಾಜಸ್ಥಾನ ಹುತಾತ್ಮರ ನಾಡಾಗಿದ್ದು, ಪ್ರತೀ ಜಿಲ್ಲೆಯಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕರಿದ್ದಾರೆ. ಇಂತವರ ವಿಚಾವರನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದ್ದು, ದೇಶಕ್ಕಾಗಿ ಪ್ರಾಣತೆತ್ತ ಯೋಧರ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪಠ್ಯವನ್ನಾಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.  

POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್

ಈ ಬಗ್ಗೆ ರಾಜಸ್ತಾನ ವಿಪಕ್ಷವಾದ ಬಿಜೆಪಿಯೂ ಕೂಡ ಅಂಕಿತ ನೀಡಿದ್ದು, ಇದೊಂದು ಒಳ್ಳೆಯ ನಿರ್ಧಾರ ಎಂದು ಸ್ವಾಗತಿಸಿದೆ. ಇನ್ನೂ ಅನೇಕ ಹುತಾತ್ಮರದ ವಿಚಾರಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಪಠ್ಯ ರೂಪಿಸುತ್ತಿರುವುದು ಒಳ್ಳೆಯ ನಿರ್ಧಾರವೆಂದು ವಿಪಕ್ಷ ಮುಖಂಡರು ಹೇಳಿದ್ದಾರೆ.  

ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ

ಪುಲ್ವಾಮದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಭೀಕರ ದಾಳಿಯಲ್ಲಿ ರಾಜಸ್ಥಾನದ ಐವರು ಯೊಧರಾದ ರೋಹಿತಾಶ್ ಲಾಂಬ, ಭಗೀರತ್ ಸಿಂಗ್, ಹೇಮರಾಜ್ ಮೀನ, ನಾರಾಯಣ್ ಗುರ್ಜರ್, ಗೀತಾರಾಮ್ ಗುರ್ಜರ್ ಹುತಾತ್ಮರಾಗಿದ್ದರು.

Follow Us:
Download App:
  • android
  • ios