ಬೀದರ್‌ (ಮಾ. 13): ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿ ಸಂದರ್ಭ ಸಾವು ಗೆದ್ದಿದ್ದ ಬೀದರ್‌ ಮೂಲದ ಯೋಧರೊಬ್ಬರು ತವರಿಗೆ ಮರಳಿದ್ದಾರೆ. ಅವರೇ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್‌ ತಾಂಡಾದ ಯೋಧ ಮನೋಹರ ರಾಠೋಡ್‌.

ಮೈಸೂರಿಗಾಗಿ ದೋಸ್ತಿಗಳ ಕುಸ್ತಿ: ಉಭಯ ಪಕ್ಷಗಳ ಹಠದ ಹಿಂದಿದೆ ಈ ಕಾರಣ!

ಫೆ.14ರಂದು ಪುಲ್ವಾಮಾದಲ್ಲಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಉಗ್ರನೊಬ್ಬ ಭಾರೀ ಸ್ಫೋಟಕ ತುಂಬಿದ್ದ ಕಾರೊಂದನ್ನು ಯೋಧರಿದ್ದ ಬಸ್‌ಗೆ ಡಿಕ್ಕಿ ಹೊಡೆಸಿದ್ದ. ಈ ವೇಳೆ ಸಂಭವಿಸಿದ ಸ್ಫೋಟದಲ್ಲಿ ಭಾರೀ ಸದ್ದಿನೊಂದಿಗೆ ಇಡೀ ಬಸ್‌ ಛಿದ್ರಛಿದ್ರವಾಗಿತ್ತು.

ದೇವೇಗೌಡರ ಕ್ಷೇತ್ರ ಆಯ್ಕೆ ಇನ್ನೂ ನಿಗೂಢ: ಈ 2 ಕ್ಷೇತ್ರಗಳ ಮೇಲಿದೆ ಕಣ್ಣು!

ಕಾರು ಡಿಕ್ಕಿ ಹೊಡೆದ ಬಸ್‌ನ ಹಿಂದೆ ಇದ್ದ ಬಸ್‌ನಲ್ಲೇ ಮನೋಹರ ರಾಠೋಡ್‌ ಇದ್ದರು. ಸ್ಫೋಟದ ತೀವ್ರತೆಗೆ ಅವರ ಬಸ್‌ಗೂ ಹಾನಿಯಾಗಿದ್ದು, ಇವರ ವಾಹನದಲ್ಲಿದ್ದ ಮೂವರು ಯೋಧರೂ ಹುತಾತ್ಮರಾಗಿದ್ದರು. ಆದರೆ ಘಟನೆ ವೇಳೆ ಮೂರ್ಛೆ ಹೋಗಿದ್ದ ಮನೋಹರ್‌ ಕೂಡ ಹುತಾತ್ಮರಾಗಿದ್ದಾರೆಂದೇ ಭಾವಿಸಲಾಗಿತ್ತು. ಆದರೆ ಅವರು ಕೈಕಾಲು ಆಡಿಸಿದ ನಂತರವೇ ಬದುಕಿರುವುದು ಗೊತ್ತಾಗಿ ಮತ್ತೆ ಅಲ್ಲಿನ ಯೋಧರು ದೆಹಲಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಮನೋಹರ್‌ ಚೇತರಿಸಿಕೊಂಡು ವೈದ್ಯಕೀಯ ರಜೆ ಮೇಲೆ ತವರಿಗೆ ಮರಳಿದ್ದಾರೆ.