ಬೆಂಗಳೂರು[ಮಾ.13]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾನ ಹೊಂ ದಾಣಿಕೆಗೆ ಮುಂದಾಗಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮೈಸೂರು ಲೋಕಸಭಾ ಕ್ಷೇತ್ರ ಯಾರ ಪಾಲಾಗಬೇಕು ಎಂಬುದು ಕಗ್ಗಂಟಾಗಿ ಪರಿಣಮಿಸಿದೆ.

ಸದ್ಯಕ್ಕೆ ಮೈಸೂರು ಬಿಜೆಪಿ ವಶದಲ್ಲಿರುವುದರಿಂದ ಎರಡೂ ಪಕ್ಷಗಳು ತಮ್ಮ ಹಕ್ಕೊತ್ತಾಯ ಮಂಡಿಸಿದ್ದು, ಅಂತಿಮವಾಗಿ ‘ಕೊಡು -ಕೊಳ್ಳುವಿಕೆ’ಯ ಕಸರತ್ತಿನ ನಂತರ ಬಿಕ್ಕಟ್ಟು ಇತ್ಯರ್ಥಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮೈಸೂರು ಬದಲು ಉಡುಪಿ - ಚಿಕ್ಕಮಗಳೂರು ಅಥವಾ ಉತ್ತರ ಕನ್ನಡ ಕ್ಷೇತ್ರಗಳ ಪೈಕಿ ಒಂದನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್ ತಿಳಿಸಿದೆ. ಇದಕ್ಕೆ ಒಪ್ಪದ ಜೆಡಿಎಸ್ ನಾಯಕರು, ಮೈಸೂರು ನೀಡದಿದ್ದರೆ ಅದರ ಬದಲು ಹಾಲಿ ಕಾಂಗ್ರೆಸ್ ವಶದಲ್ಲಿರುವ ತುಮ ಕೂರು ಕ್ಷೇತ್ರವನ್ನು ಕೊಡಿ ಎಂಬ ಷರತ್ತಿನ ರೂಪದ ಒತ್ತಡವನ್ನು ಮುಂದಿಟ್ಟಿದ್ದಾರೆ. ಒಟ್ಟಿನಲ್ಲಿ ಪಕ್ಷ ಗೆಲ್ಲುವ ಅವಕಾಶವಿರುವ ಮೈಸೂರು ಹಾಗೂ ತುಮಕೂರಿನ ಪೈಕಿ ಒಂದ ನ್ನಾದರೂ ಪಡೆಯಲೇಬೇಕು ಎಂಬ ನಿಲುವಿಗೆ ಜೆಡಿಎಸ್ ನಾಯಕರು ಬಂದಂತಿದೆ. ತಮ್ಮ ಪಕ್ಷದ ಪ್ರಾಬಲ್ಯವಿದೆ ಇದೆ.

ಇಬ್ಬರು ಸಚಿವರು ಆ ಜಿಲ್ಲೆಯನ್ನು ಪ್ರತಿನಿಧಿಸುತ್ತಿ ದ್ದಾರೆ ಎಂಬ ಕಾರಣಕ್ಕಾಗಿ ಮೈಸೂರು ಕ್ಷೇತ್ರವನ್ನು ತಮಗೆ ಬಿಟ್ಟು ಕೊಡುವಂತೆ ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ, ತಮ್ಮ ತವರು ಕ್ಷೇತ್ರವಾಗಿರುವುದರಿಂದ ಬಿಟ್ಟು ಕೊಡು ವುದು ಕಷ್ಟ ಎಂಬ ಮಾತನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಹೇಳಿದ್ದಾರೆ

ಈ ನಡುವೆ ಎಚ್.ಡಿ. ದೇವೇಗೌಡರೇ ಮೈಸೂರಿನಿಂದ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರು ಉತ್ತರ ಕ್ಷೇತ್ರದ ಬಗ್ಗೆ ಮಾಹಿತಿ ಸಂಗ್ರಹಿಸು ತ್ತಿರುವ ಗೌಡರು ಅಲ್ಲಿ ಗೆಲುವಿನ ವಾತಾವರಣ ಕಂಡು ಬರದಿದ್ದರೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮೈಸೂರಿನಿಂದಲೇ ಕಣಕ್ಕಿಳಿದರೆ ಹೇಗೆ ಎಂಬ ಚಿಂತನೆ ನಡೆಯುತ್ತಿದೆ.

ಆದರೆ, ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ನಂತರ ಗೆಲುವು ಸಾಧಿಸಿದಲ್ಲಿ ಮುಂದೆ ಕಾಂಗ್ರೆಸ್ ಪ್ರಭಾವ ಮಂಕಾಗಬಹುದು ಎಂಬ ಆತಂಕವನ್ನು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ. ಮೇಲಾಗಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‌ಗೆ ಕರೆತಂದಿರುವು ದರಿಂದ ಅವರನ್ನೇ ಅಭ್ಯರ್ಥಿಯನ್ನಾಗಿಸಿ ಜೆಡಿಎಸ್ ಬೆಂಬಲದೊಂದಿಗೆ ಗೆಲ್ಲಿಸಿಕೊಂಡು ಬರಬಹುದು ಎಂಬ ಲೆಕ್ಕಾಚಾರವೂ ಸಿದ್ದರಾಮಯ್ಯರ ತಲೆಯಲ್ಲಿ ಸುಳಿದಾಡುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ನ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಮೈಸೂರನ್ನು ಜೆಡಿಎಸ್‌ಗೆ ಬಿಟ್ಟುಕೊಡದಿರಲು ಸಿದ್ದರಾಮಯ್ಯ ಒತ್ತಡ ಹಾಕುವುದು ಸಹಜ. ಅದು ಅವರ ಹೃದಯಕ್ಕೆ ಹತ್ತಿರವಾದ ಕ್ಷೇತ್ರ. ಮೈಸೂರು ಬದಲು ಉಡುಪಿ ಅಥವಾ ಉತ್ತರ ಕನ್ನಡದಲ್ಲಿ ಸ್ಪರ್ಧಿಸುವುದಕ್ಕೆ ಕಾಂಗ್ರೆಸ್ ತಿಳಿಸಿದೆ. ಆದರೆ ಆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಮೈಸೂರನ್ನು ಕಾಂಗ್ರೆಸ್ ಉಳಿಸಿಕೊಂಡಲ್ಲಿ ಜೆಡಿಎಸ್‌ಗೆ ತುಮಕೂರು ಬಿಟ್ಟುಕೊಡುವಂತೆ ಕೇಳಲಾಗುವುದು. ಮೈಸೂರು ಕಾಂಗ್ರೆಸ್‌ಗೆ ಹೇಗೆ ಹೃದಯಕ್ಕೆ ಹತ್ತಿರವೋ ಹಾಗೆ ನಮಗೆ ತುಮಕೂರು ಹೃದಯಕ್ಕೆ ಹತ್ತಿರವಾದ ಕ್ಷೇತ್ರ ಎಂದರು.

ಜೆಡಿಎಸ್ ಯಾಕೆ ಪಟ್ಟು?

-ಗೆಲ್ಲುವ ಅವಕಾಶವಿರುವ ಮೈಸೂರು ಕ್ಷೇತ್ರವನ್ನು ತನಗೆ ಕೊಡಬೇಕು

-ಮೈಸೂರಿನ ಇಬ್ಬರು ಸಚಿವರು ಜೆಡಿಎಸ್ ಗೆ ಸೇರಿದವರು, ವಿಧಾನಸಭೆ, ಜಿ.ಪಂ. ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಬಲ ಗಮನಾರ್ಹವಾಗಿದೆ -

ಮೈಸೂರಿಗೆ ಕಾಂಗ್ರೆಸ್‌ನವರು ಪಟ್ಟು ಹಿಡಿದರೆ ಅದರ ಬದಲು ತುಮಕೂರು ಕ್ಷೇತ್ರಕ್ಕೆ ಬೇಡಿಕೆ ಇಡುವುದು

ಸಿದ್ದು ಬಿಗಿಪಟ್ಟು ಏಕೆ?

-ತಮ್ಮನ್ನು ನೆಚ್ಚಿಕೊಂಡು ಬಿಜೆಪಿ ತೊರೆದು ಬಂದ ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಿಸಲು ಯತ್ನಿಸುವುದು

-ಜೆಡಿಎಸ್‌ಗೆ ಮೈಸೂರು ಬಿಟ್ಟುಕೊಟ್ಟರೆ ಮುಂದೆ ಈ ಭಾಗದಲ್ಲಿ ಕಾಂಗ್ರೆಸ್ ಸಂಘಟನೆ ಕಷ್ಟವಾಗಬಹುದು ಎಂಬ ಆತಂಕ

-ಹೊಂದಾಣಿಕೆ ವೇಳೆ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟು ಮೈಸೂರು ಕ್ಷೇತ್ರವನ್ನು ಪಡೆಯಲು ಯತ್ನಿಸುವುದು

-ಮೈಸೂರು ಕೊಡಲೇ ಬೇಕಾದರೆ ಜಿಟಿಡಿ ಪುತ್ರನಿಗೆ ಟಿಕೆಟ್ ನೀಡದಂತೆ ಷರತ್ತು ವಿಧಿಸುವುದು