ವೈದ್ಯೋನಾರಾಯಣ ಹರಿ ಅನ್ನೋ ಮಾತಿದೆ. ಆದರೆ ಇಲ್ಲೊಬ್ಬ ಡಾಕ್ಟರ್​​ ರೋಗಿಗಳಿಗೆ ಯಮಸ್ವರೂಪಿಯಾಗಿದ್ದಾನೆ. ಸಿಬ್ಬಂದಿಗಳಿಗೆ ರೌಡಿ ತರ ಅವಾಜ್​ ಹಾಕ್ತಾನೆ. ರೋಗಿಗಳೊಂದಿಗೆ ಹುಚ್ಚರಂತೆ ವರ್ತಿಸುತ್ತಾನೆ. ಯಾರು ಆ ಮೆಂಟಲ್​ ಡಾಕ್ಟರ್​ ಯಾರುಅಂತೀರಾ ಇಲ್ಲಿದೆ ವಿವರ.

ಚಿಕ್ಕಮಗಳೂರು(ಸೆ.02): ಈತನೇ ನಾವು ಹೇಳ್ತಿರೋ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಮೆಂಟಲ್ ಡಾಕ್ಟರ್. ಹೆಸರು ವೀರೇಶ್ ವೈ ನರೇಗಲ್. ವೈದ್ಯ ವೃತ್ತಿಯಲ್ಲಿ 20 ವರ್ಷ ಸರ್ವೀಸ್. ಹಾಗಂತ ನೀವು ಈತನ ಬಳಿ ಹೋದರೆ ಕಾಯಿಲೆಯಿಂದ ಗುಣಮುಖರಾಗಲ್ಲ. ಬದಲಾಗಿ ಇವನು ಹೇಳುವ ಮಾತುಗಳಿಂದ ಮತ್ತಷ್ಟು ದಿನ ಹಾಸಿಗೆ ಹಿಡಿಯುತ್ತೀರಾ.

ಬ್ಲಡ್ ಟೆಸ್ಟ್ ಮಾಡ್ತೀನಿ ಅಂತ ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಾನೆ, ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ನಿಂಗೆ ಏಡ್ಸ್ ಇದೆ ಅಂತಾನೆ. ಡಾಕ್ಟರ್​ನ ಈ ​ಹುಚ್ಚುತನಕ್ಕೆ ರೋಗಿಗಳು ಹೈರಾಣಾಗಿದ್ದಾರೆ.

ಬರೀ ರೋಗಿಗಳೊಂದಿಗೆ ಮಾತ್ರ ಅಲ್ಲ ಆಸ್ಪತ್ರೆ ಸಿಬ್ಬಂದಿಯೊಂದಿಗೂ ಮೆಂಟಲ್​ ತರ ವರ್ತಿಸ್ತಾನೆ. ನರ್ಸ್‌ಗೆ ನಿನ್ನ ಗೌನ್ ಬಿಚ್ಚು, ಬಿಪಿ ಟೆಸ್ಟ್ ಮಾಡ್ಬೇಕು ಅಂತಾ ಎಳೆದಾಡ್ತಾನಂತೆ. ತನ್ನ ಮಾತು ಕೇಳದಿದ್ರೆ ಕರ್ನಾಟಕದ ತುದಿಗೆ ಟ್ರಾನ್ಸ್‌ಫರ್ ಮಾಡಿಸ್ತೇನೆಂದು ಆವಾಜ್ ಹಾಕ್ತಾನಂತೆ. ಈತನ ಹುಚ್ಚುತನದಿಂದ ರೋಸಿಹೋಗಿರುವ ನರ್ಸ್‌ಗಳು ಚಿಕಿತ್ಸೆಗೆ ಬಂದ ರೋಗಿಗೆ ಏನಾದ್ರು ತೊಂದರೆಯಾದ್ರೆ ನಾವು ಜವಾಬ್ದಾರರಲ್ಲ ಅಂತ ತಾಲೂಕು ಆಡಳಿತಾಧಿಕಾರಿಗೆ ದೂರ ನೀಡಿದ್ದಾರಂತೆ. ಹೀಗಾಗಿ ಈತನ ಬಳಿ ಹೋಗಲು ಸ್ಥಳೀಯರು ಹಿಂದೇಟು ಹಾಕ್ತಿದ್ದಾರೆ.

ಈತ ಕೊಪ್ಪಳದ ನಿವಾಸಿ. ದಾವಣಗೆರೆ, ಬಳ್ಳಾರಿ, ಭಟ್ಕಳ, ಯಾದಗಿರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾನೆ. ಆದ್ರೆ ಎಲ್ಲಾ ಕಡೆಗಳಲ್ಲೂ ಕರ್ತವ್ಯ ಲೋಪದ ಆರೋಪವಿದೆ. ವೀರೇಶ್ ವೈ ನರೇಗಲ್ ಕೌಟುಂಬಿಕ ಸಮಸ್ಯೆಯಿಂದ ಸಾಕಷ್ಷು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಅಂತ ಕೂಡಾ ಹೇಳಲಾಗ್ತಿದೆ. ಕಾರಣ ಏನೇ ಇರಲಿ, ಈ ವೈದ್ಯ ಮಹಾಶಯನ ಹುಚ್ಚಾಟಕ್ಕೆ ಹಿರಿಯ ಅಧಿಕಾರಿಗಳು ಶೀಘ್ರವೇ ಬ್ರೇಕ್ ಹಾಕಬೇಕಿದೆ. ಇಲ್ಲವಾದ್ರೆ, ಸಣ್ಣ-ಪುಟ್ಟ ಖಾಯಿಲೆ ಅಂತ ಆಸ್ಪತ್ರೆಗೆ ಬರೋ ರೋಗಿಗಳಿಗೆ ಡಾಕ್ಟರೇ ಯಮನಾಗೋದ್ರಲ್ಲಿ ಡೌಟೇ ಇಲ್ಲ.