ನಮಗೆ ಕನಿಷ್ಠ ವೇತನ ನೀಡಿ. ನೀವು ಕೊಡುವವರೆಗೂ ನಾವು ಬಿಡುವುದಿಲ್ಲ ಅಂತಾ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಪಣ ತೊಟ್ಟಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಇಲ್ಲಿಂದ ಜಗ್ಗೋದಿಲ್ಲಾ ಅಂತಾ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ತಮ್ಮ ಕಟು ನಿರ್ಧಾರಕ್ಕೆ ಸ್ಥಿರವಾಗಿದ್ದಾರೆ. ಆದರೆ ಇಲ್ಲೂ ಸರ್ಕಾರ ತನ್ನ ರಾಜಕೀಯದಾಟಕ್ಕೆ ‘ಕೈ’ ಹಾಕಿದೆ.

ಬೆಂಗಳೂರು(ಮಾ.23): ನಮಗೆ ಕನಿಷ್ಠ ವೇತನ ನೀಡಿ. ನೀವು ಕೊಡುವವರೆಗೂ ನಾವು ಬಿಡುವುದಿಲ್ಲ ಅಂತಾ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಪಣ ತೊಟ್ಟಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಇಲ್ಲಿಂದ ಜಗ್ಗೋದಿಲ್ಲಾ ಅಂತಾ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ತಮ್ಮ ಕಟು ನಿರ್ಧಾರಕ್ಕೆ ಸ್ಥಿರವಾಗಿದ್ದಾರೆ. ಆದರೆ ಇಲ್ಲೂ ಸರ್ಕಾರ ತನ್ನ ರಾಜಕೀಯದಾಟಕ್ಕೆ ‘ಕೈ’ ಹಾಕಿದೆ.

ರಾಜಕೀಯದಾಟಕ್ಕೆ 'ಕೈ’ ಹಾಕಿದೆಯಾ ಸರ್ಕಾರ?

ನಮಗೆ ನ್ಯಾಯ ಕೊಡಿ ಅಂತಾ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಎಲೆಕ್ಷನ್ ಮುಗಿಸಿ, ಏಪ್ರಿಲ್ 19ರ ನಂತ್ರ ನಿಮ್ಮ ಜೊತೆ ಮಾತನಾಡುತ್ತೇವೆ ಎಂದಿದೆ.

ಹೋರಾಟದಲ್ಲಿರುವ ಸುಮಾರು 5 ರಿಂದ 6 ಸಂಘಟನೆಗಳು ಭಾಗಿಯಾಗಿದ್ದು, ಇದರಲ್ಲಿ 4 ಸಂಘಟನೆಗಳ ಜೊತೆ ಸಿಎಂ ಮೂರನೇ ಸುತ್ತಿನ ಮಾತುಕತೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ, ಸ್ವಾತಂತ್ರ್ಯ ಸಂಘಟನೆ, ಕ್ಷೇಮಾಭಿವೃದ್ಧಿ ಸಂಘ ಮತ್ತು ಸಂಯುಕ್ತ ನೌಕರರ ಸಂಘಗಳು ಸರ್ಕಾರದ ಮಾತಿಗೆ ತಲೆದೂಗಿ, ಮುಷ್ಕರ ವಾಪಸ್ ಪಡೆಯುವುದಾಗಿ ತಿಳಿಸಿದವು.

ಆದರೆ ಒಗ್ಗಟಿನ ಹೋರಾಟದಲ್ಲಿ ಕೈ ಚಳಕ ತೋರಿಸಿರುವ ಸರ್ಕಾರಕ್ಕೆ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ಸರ್ಕಾರ ಮಾತುಕತೆ ನಡೆಸಿರೋದು ಸಣ್ಣ ಪುಟ್ಟ ಸಂಘಟನೆಗಳ ಜೊತೆ. ಆದ್ರೆ ಇಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿರೋದು ಸಿಐಟಿಯು ಮತ್ತು ಎಐಟಿಯುಸಿ ಸಂಘಗಳು. ನಮ್ಮ ಬೇಡಿಕೆ ಈಡೇರೊವರೆಗೂ ನಾವು ಇಲ್ಲಿಂದ ಜಗ್ಗೊಲ್ಲ ಅಂತಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ‘ನೀ ಕೊಡೆ, ನಾ ಬಿಡೆ’ ಅಂತಾ ನಡೆಯುತ್ತಿರುವ ಹೋರಾಟದಲ್ಲಿ, ಮಹಿಳೆಯರು ಮನೆ ಬಿಟ್ಟು ಬೀದಿಯಲ್ಲೇ ದಿನಕಳೆಯುವಂತಹ ಸ್ಥಿತಿ ಎದುರಾಗಿದೆ.