ಜಿಎಸ್ಟಿ ಜಾರಿಗೊಳಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗ್ತಿದೆ. ಪ್ರತಿಭಟನಾಕಾರರು ವಿಧಾನಸಭೆಯತ್ತ ನುಗ್ಗಲು ಯತ್ನಿಸಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಹೊಸ ತೆರಿಗೆ ನೀತಿ ಅನುಷ್ಠಾನಗೊಳಿಸುವುದು ರಾಜ್ಯದ ವಿಶೇಷ ಸ್ಥಾನ ಮತ್ತು ಅದರ ಹಣಕಾಸಿನ ಸ್ವಾಯತ್ತತೆ ಕಿತ್ತುಕೊಳ್ಳಲಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀನಗರ: ಜಿಎಸ್ಟಿ ಜಾರಿಗೊಳಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗ್ತಿದೆ.
ಪ್ರತಿಭಟನಾಕಾರರು ವಿಧಾನಸಭೆಯತ್ತ ನುಗ್ಗಲು ಯತ್ನಿಸಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಹೊಸ ತೆರಿಗೆ ನೀತಿ ಅನುಷ್ಠಾನಗೊಳಿಸುವುದು ರಾಜ್ಯದ ವಿಶೇಷ ಸ್ಥಾನ ಮತ್ತು ಅದರ ಹಣಕಾಸಿನ ಸ್ವಾಯತ್ತತೆ ಕಿತ್ತುಕೊಳ್ಳಲಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪ್ಪು ಧ್ವಜಗಳನ್ನು ಹಿಡಿದ ಪ್ರತಿಭಟನಾನಿರತರು ಜಿಎಸ್ಟಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಇಲ್ಲಿನ ಜಹಾಂಗೀರ್ ಚೌಕದ ವರೆಗೆ ಮೆರವಣಿಗೆ ನಡೆಸಿದ್ದಾರೆ.
ಬಳಿಕ ನಾಗರಿಕ ಸಚಿವಾಲಯದ ಸಂಕೀರ್ಣದತ್ತ ನುಗ್ಗಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಸಚಿವಾಲಯದ ಹೊರಗೆ ಬಂಧಿಸಿದ್ದಾರೆ.
ನಿನ್ನೆ ಜಿಎಸ್ಟಿ ಮಸೂದೆ ಮಂಡನೆ ವೇಳೆ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿತ್ತು. ಜಿಎಸ್ಟಿ ವಿರೋಧಿಸಿದ ವಿಪಕ್ಷಗಳು ಪ್ರತಿಭಟನೆಗೆ ಮುಂದಾದವು. ಶಾಸಕರು ಒಬ್ಬರನ್ನೊಬ್ಬರು ಎಳೆದಾಡಿಕೊಂಡಿದ್ದು ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು.
