ಮಂಡ್ಯ (ಫೆ. 24): ಹುತಾತ್ಮ ಯೋಧ ಗುರು ಸ್ವಗ್ರಾಮದಲ್ಲೇ ಪಾಕಿಸ್ತಾನದ ಪರ ಅಸ್ಸಾಂ ಮೂಲದ ಕೂಲಿ ಕಾರ್ಮಿಕನೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾನೆ.  ಹುತಾತ್ಮ ಯೋಧ ಗುರು ಸ್ವಗ್ರಾಮ ಪಕ್ಕದ ಕೆ.ಎಂ.ದೊಡ್ಡಿಯಲ್ಲಿ ಈ ಘಟನೆ ನಡೆದಿದೆ. 

ಕೆ.ಎಂ.ದೊಡ್ಡಿಯ ಮಿಲ್ ನಲ್ಲಿ  ಕೂಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಸಾದಿಕ್ ಎಂಬಾತ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.  ಸಿಟ್ಟುಗೊಂಡ ಸಾರ್ವಜನಿಕರು ಸಾದಿಕ್ ಗೆ ಧರ್ಮದೇಟು ನೀಡಿದ್ದಾರೆ.  ಸಾದಿಕ್ ನನ್ನ ಸುತ್ತುವರಿದು ಭಾರತ್ ಮಾತಾಕಿ ಜಿಂದಾಬಾದ್ ಎಂದು ಘೋಷಣೆ ಕೂಗಿಸಿದ್ದಾರೆ. 

’ಭಾರತ್ ಮಾತಾಕಿ ಜಿಂದಾಬಾದ್’ ಎನ್ನುವ ಬದಲು ಮತ್ತೊಮ್ಮೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.  ಈ ವೇಳೆ ಕೋಪಗೊಂಡ ಸಾರ್ವಜನಿಕರು ಮತ್ತೊಮ್ಮೆ  ಥಳಿಸಿದ್ದಾರೆ.  ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

"