Asianet Suvarna News Asianet Suvarna News

ಚಿಕಾಗೋ ಐತಿಹಾಸಿಕ ಭಾಷಣಕ್ಕೆ 125 ವರ್ಷ..! ಇಂದು ಬೆಳಗ್ಗೆ ಮೋದಿ ಭಾಷಣ

ಸ್ವಾಮಿ ವಿವೇಕಾನಂದ ಅವರು ಚಿಕಾಗೋ ವಿಶ್ವಧರ್ಮ ಸಂಸತ್ತಿನಲ್ಲಿ ಉದ್ದೇಶಿಸಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಪ್ರಧಾನಿ ಮೋದಿ 'ಯಂಗ್ ಇಂಡಿಯಾ, ನ್ಯೂ ಇಂಡಿಯಾ' ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೆಳಿಗ್ಗೆ 10.30ಕ್ಕೆ ಭಾಷಣ ಮಾಡಲಿದ್ದಾರೆ.

Prime Minister Narendra Modi To Address Students Convention Today

ನವದೆಹಲಿ(ಸೆ.11) ಹಿಂದೂ ಧರ್ಮದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಷಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನೆದುರು ಸ್ವಾಮಿ ವಿವೇಕನಂದರು ಅನಾವರಣ ಮಾಡಿ ಇಂದಿಗೆ 125 ವರ್ಷ ತುಂಬಿದೆ. ಹೌದು

1893ರ ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ ಬಡಿದೆಬ್ಬಿಸುತ್ತೆ. ಅಮೆರಿಕದ ಜನತೆಯನ್ನು ಸಹೋದರ ಸಹೋದರಿಯರೆ ಎಂದು ಉದ್ದೇಶಿಸಿ ಕಂಚಿನ ಕಂಠದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ್ದರು.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಇಂದಿಗೆ 125 ವರ್ಷ. ಸ್ವಾಮಿ ವಿವೇಕಾನಂದ ಅವರು ಚಿಕಾಗೋ ವಿಶ್ವಧರ್ಮ ಸಂಸತ್ತಿನಲ್ಲಿ ಉದ್ದೇಶಿಸಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಪ್ರಧಾನಿ ಮೋದಿ 'ಯಂಗ್ ಇಂಡಿಯಾ, ನ್ಯೂ ಇಂಡಿಯಾ' ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೆಳಿಗ್ಗೆ 10.30ಕ್ಕೆ ಭಾಷಣ ಮಾಡಲಿದ್ದಾರೆ. ಈ ಭಾಷಣವನ್ನು ವೀಕ್ಷಿಸುವುದು ಕಡ್ಡಾಯ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಸೂಚನೆ ನೀಡಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸುತ್ತೋಲೆ ಹೊರಡಿಸಿವೆ. ಮೈಸೂರು ವಿ.ವಿ.ಯೂ ಈ ಸುತ್ತೋಲೆಯನ್ನು ಹೊರಡಿಸಿದ್ದು, ವಿ.ವಿ ವ್ಯಾಪ್ತಿಯ ಎಲ್ಲ ಅಧ್ಯಯನ ವಿಭಾಗಗಳ ನಿರ್ದೇಶಕರು, ಅಧ್ಯಕ್ಷರು, ಕಾಲೇಜುಗಳ ಪ್ರಾಂಶುಪಾಲರಿಗೆ ತಮ್ಮ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವಂತೆ ನಿರ್ದೇಶನ ನೀಡಲಾಗಿದೆ.

ಇನ್ನು ಮೈಸೂರಿನ ಮಾನಸಗಂಗೋತ್ರಿ ಆವರಣದ ಸೆನೆಟ್‌ ಭವನದಲ್ಲಿ ಇದಕ್ಕಾಗಿ ಸಿದ್ಧತೆ ನಡೆದಿದ್ದು, ಪರದೆಗಳನ್ನು ಅಳವಡಿಸಲಾಗಿದೆ. ಭವನದಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಕೂರಲು ಅವಕಾಶವಿದೆ. ವಿ.ವಿ ವ್ಯಾಪ್ತಿಯ ಎಲ್ಲ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಲಾಗಿದೆ.

Follow Us:
Download App:
  • android
  • ios