ಮೊಬೈಲ್‌ನಲ್ಲಿ ಕ್ಯಾಂಡಿಕ್ರಶ್ ಆಡುವುದನ್ನು ಕಲಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ದೇವಸ್ಥಾನದಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಪೂಜಾರಿಗೆ ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ದಾವಣಗೆರೆ: ಮೊಬೈಲ್‌ನಲ್ಲಿ ಕ್ಯಾಂಡಿಕ್ರಶ್ ಆಡುವುದನ್ನು ಕಲಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ದೇವಸ್ಥಾನದಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಪೂಜಾರಿಗೆ ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಜಾಲಿ ನಗರದ ಗಣೇಶ ದೇವಸ್ಥಾನದ ಪೂಜಾರಿ ವೀರಭದ್ರಪ್ಪ (19) ಧರ್ಮದೇಟು ತಿಂದವ. ಬಾಲಕಿಗೆ ಮೊಬೈಲ್‌ನಲ್ಲಿ ಕ್ಯಾಂಡಿ ಕ್ರಶ್ ಆಟವಾಡುವುದನ್ನು ಹೇಳಿಕೊಡುವುದಾಗಿ ಆರೋಪಿ ವೀರಭದ್ರಪ್ಪ ದೇವಸ್ಥಾನದೊಳಗೆ ಕರೆಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ.

ಆಗ ತಕ್ಷಣವೇ ಸಾರ್ವಜನಿಕರು ಹಿಡಿದು, ಹೊರಗೆಳೆದಿದ್ದಾರೆ. ದೇವಸ್ಥಾನ ಬಳಿಯೇ ಆರೋಪಿಗೆ ಧರ್ಮದೇಟು ನೀಡಿದ ಸಾರ್ವಜನಿಕರು ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿ ವೀರಭದ್ರಪ್ಪನನ್ನು ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು, ನಂತರ ತಮ್ಮ ವಶಕ್ಕೆ ಪಡೆದರು.

ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.