ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ಮನೆ ಒಳಗಿನ ಜಗಳ ಬೀದಿಯಲ್ಲಿ ಸದ್ದು ಮಾಡಿದೆ. ಹೆಂಡಿತಿ ಆಕ್ರೋಶ, ಕಿತ್ತಾಟದ ನಡುವೆ ಗಂಡ ಬೈಕ್ ರೈಡ್ ಮಾಡಿದ್ದಾನೆ.
ಗಂಡ ಹೆಂಡತಿ ನಡುವಿನ ಜಗಳ ಮನೆಯೊಳಗೆ ಸಮಸ್ಯೆ ಬಗೆಹರಿಸಿಕೊಂಡರೆ ಸುಖ ಸಂಸಾರ, ಬೀದಿ ಬಂದರೆ ಆಪತ್ತು ಮಾತ್ರವಲ್ಲ, ಜಗಜ್ಜಾಹೀರಾಗಲಿದೆ. ವಿಡಿಯೋ ವೈರಲ್ ಆಗಿ ಸಂಸಾರ ಸರಿಪಡಿಸಲು ಸಾಧ್ಯವಾಗದ ಮಟ್ಟಿಗೆ ತಲುಪಲಿದೆ. ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಗಂಡನ ಮೇಲಿನ ಸಿಟ್ಟು, ಆಕ್ರೋಶ, ಆರೋಪ ಎಲ್ಲವನ್ನೂ ಬೀದಿಯಲ್ಲೇ ತೀರಿಸಿಕೊಂಡಿದ್ದಾಳೆ. ಗಂಡನ ಹಿಂದೆ ಬೈಕ್‌ನಲ್ಲಿ ತೆರಳುತ್ತಿರುವ ಹೆಂಡತಿ, ಕಿತ್ತಾಡಿದ್ದಾಳೆ, ಗಂಡನಿಗೆ ಹಿಗ್ಗಾ ಮುಗ್ಗಾ ಬಾರಿಸಿದ್ದಾಳೆ. ಇವೆಲ್ಲವೂ ಚಲಿಸುತ್ತಿರುವ ಬೈಕ್‌ನಲ್ಲೇ ನಡೆದಿದೆ. ಹಿಂಬದಿಯಲ್ಲಿದ್ದ ವಾಹನ ಸವಾರರು ಈ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಯೂಸಿ ರಸ್ತೆಯಲ್ಲಿ ಬೈಕ್‌ನಲ್ಲಿ ಗಂಡ-ಹೆಂಡತಿ ಸಾಗಿದ್ದಾರೆ. ಇದರ ನಡುವೆ ಹೆಂಡತಿ ಹಾಗೂ ಗಂಡನ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಒಂದು ಹಂತದಲ್ಲಿ ವಾಗ್ವಾದ ತೀವ್ರ ಸ್ಪರೂಪಕ್ಕೆ ತೆರಳಿದೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಹೆಂಡತಿ, ಚಲಿಸುತ್ತಿರುವ ಬೈಕ್‌ನಲ್ಲೇ ಗಂಡನ ಮೇಲೆ ಬಾರಿಸಿದ್ದಾಳೆ. ತಲೆ ಜಜ್ಜಿದ್ದಾಳೆ. ಹಿಂಬದಿಯಿಂದ ಗಂಡನ ಮೇಲೆ ಸತತವಾಗಿ ಎಗರಿ ಬಿದ್ದಿದ್ದಾಳೆ, ಮುಖ, ತಲೆ ನೋಡದೆ ಹೊಡೆದಿದ್ದಾಳೆ. ಕೊನೆಗೆ ಕೂದಲು ಹಿಡಿದು ಜಗ್ಗಿದ್ದಾಳೆ.
ಹೆಂಡತಿ ಕೋಪಕ್ಕೆ ಕೊನೆಗೂ ಬೈಕ್ ನಿಲ್ಲಿಸಿದ ಗಂಡ
ಈ ಗಂಡ ಹೆಂಡತಿ ಜಗಳ ಇಡೀ ರಸ್ತೆಯಲ್ಲಿ ನಡೆದಿದೆ. ಇತರ ಬೈಕ್ ಸವಾರರು, ವಾಹನ ಸವಾರರು ಈ ಪತಿ ಪತ್ನಿಯ ಜಗಳವನ್ನು ಕುತೂಹಲದಿಂದ ನೋಡಿದ್ದಾರೆ. ಹಲವರು ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೆಂಡತಿ ಕೊನೆಯಲ್ಲಿ ಗಂಡನ ಕೂದಲು ಹಿಡಿದು ಹಾಕಿದ ಪಟ್ಟಿಗೆ ಗಂಡ ಬೈಕ್ ನಿಲ್ಲಿಸಬೇಕಾಯಿತು. ಅಲ್ಲೀವರೆಗಿನ ಜಗಳದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಳಿಕ ಇವರ ಜಗಳ ಏನಾಯಿತು ಅನ್ನೋ ಮಾಹಿತಿ ಲಭ್ಯವಿಲ್ಲ. ಆದರೆ ಕೆಲ ಗಂಭೀರ ಪ್ರಶ್ನೆಗಳು ಇಲ್ಲಿ ಎದ್ದಿದೆ.
ಸಾರ್ವಜನಿಕ ರಸ್ತೆಯಲ್ಲಿ ಸುರಕ್ಷತಾ ಪ್ರಶ್ನೆ
ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಸೇರಿದಂತೆ ಯಾವುದೇ ಸಾಹಸ ಮಾಡುವಂತಿಲ್ಲ. ಇನ್ನು ರೈಡಿಂಗ್ ಅಥವಾ ಡ್ರೈವಿಂಗ್ ಮಾಡುವವರಿಗೂ ಸಮಸ್ಯೆ ನೀಡುವಂತಿಲ್ಲ. ತೊಂದರೆ ಕೊಡುವಂತಿಲ್ಲ. ಇದರಿಂದ ಅಪಘಾತಕ್ಕೂ ಕಾರಣವಾಗಲಿದೆ.


