ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭ್ಯರ್ಥಿಗಳ ನಾಮಕರಣಕ್ಕಾಗಿ ತ್ರಿದಸ್ಯ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯಲ್ಲಿ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಇದ್ದಾರೆ. ಚುನಾವಣಾ ತಂತ್ರ ಹೆಣೆಯುವುದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ಇಂದು ಅರುಣಾಚಲಕ್ಕೆ ನೀಡಬೇಕಿದ್ದ ಭೇಟಿಯನ್ನು ಮುಂದೂಡಿದ್ದಾರೆ.
ನವದೆಹಲಿ (ಜೂ.12): ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭ್ಯರ್ಥಿಗಳ ನಾಮಕರಣಕ್ಕಾಗಿ ತ್ರಿದಸ್ಯ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯಲ್ಲಿ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಇದ್ದಾರೆ. ಚುನಾವಣಾ ತಂತ್ರ ಹೆಣೆಯುವುದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ಇಂದು ಅರುಣಾಚಲಕ್ಕೆ ನೀಡಬೇಕಿದ್ದ ಭೇಟಿಯನ್ನು ಮುಂದೂಡಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಬುಧವಾರದಿಂದ ಪ್ರಾರಂಭಿಸಬೇಕೆಂದು ನಿನ್ನೆ ಪ್ರತಿಪಕ್ಷ ನಾಯಕರು ನಿರ್ಧರಿಸಿದ್ದರು. ಪ್ರತಿಪಕ್ಷಗಳು 10 ಸದಸ್ಯರ ತಂಡವನ್ನು ರೂಪಿಸಿದ್ದು ಅಭ್ಯರ್ಥಿಗಳ ಅಂತಿಮ ಪಟ್ಟಿಗಳನ್ನು ಪರಿಶೀಲನೆ ನಡೆಸಲಿವೆ.
ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಜೂ.28 ಕೊನೆ ದಿನಾಂಕವಾಗಿದೆ. ಜೂ.14 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
