ಏಳನೇ ವೇತನಾ ಆಯೋಗ ಅನುಷ್ಠಾನಗೊಂಡ ಬಳಿಕ ಸರಕಾರದ ಇಲಾಖಾ ಕಾರ್ಯದರ್ಶಿಗಳ ವೇತನವು ರಾಷ್ಟ್ರಪತಿಗಿಂತ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ನವದೆಹಲಿ(ಅ. 25): ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರುಗಳ ಸಂಬಳವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ರಾಷ್ಟ್ರಪತಿಯವರ ಸಂಬಳವನ್ನು 1.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲು ನಿರ್ಧರಿಸಲಾಗಿದೆ. ಉಪರಾಷ್ಟ್ರಪತಿಯವರ ಸಂಬಳ 1.1 ಲಕ್ಷದಿಂದ 3.5 ಲಕ್ಷ ರೂ.ಗೆ ಏರಿಕೆಯಾಗಲಿದೆ. ರಾಷ್ಟ್ರಪತಿಯವರ ಅಧಿಕಾರಾವಧಿ ಮುಗಿದ ಬಳಿಕ ಅವರಿಗೆ ಪ್ರತೀ ತಿಂಗಳು 1.5 ಲಕ್ಷ ರೂಪಾಯಿ ಪಿಂಚಣಿ ಸಿಗಲಿದೆ.

ಇಷ್ಟೊಂದು ಹೆಚ್ಚಳ ಯಾಕೆ?
ಏಳನೇ ವೇತನಾ ಆಯೋಗ ಅನುಷ್ಠಾನಗೊಂಡ ಬಳಿಕ ಸರಕಾರದ ಇಲಾಖಾ ಕಾರ್ಯದರ್ಶಿಗಳ ವೇತನವು ರಾಷ್ಟ್ರಪತಿಗಿಂತ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಇದೇ ವೇಳೆ, ಸಂಸದರ ಸಂಬಳ ಹೆಚ್ಚಳಕ್ಕೆ ಕೂಗು ಬಲವಾಗುತ್ತಿದೆ. ಈಗಿರುವ 50 ಸಾವಿರದಿಂದ ಒಂದು ಲಕ್ಷ ರೂ.ಗೆ ಸಂಬಳ ಹೆಚ್ಚಳ ಮಾಡಬೇಕೆಂದು ಎರಡು ತಿಂಗಳ ಹಿಂದೆ 250 ಸಂಸದರು ಬೇಡಿಕೆ ಮುಂದಿಟ್ಟಿದ್ದರು. ಇದೀಗ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ಸಂಬಳ ಹೆಚ್ಚಳಕ್ಕೆ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಂಸದರ ಸಂಬಳ ಹೆಚ್ಚಳಕ್ಕೆ ಕೂಗು ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ.