ವಿಶೇಷ ವಾಯುಸೇನೆಯ ವಿಮಾನದಲ್ಲಿ ಓಡಾಡಬೇಕು, ಹೈದರಾಬಾದ್‌ಗೆ ಹೋದರೂ ಮನೆಯಲ್ಲಿ ತಂಗುವಂತಿಲ್ಲ

40 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ವೆಂಕಯ್ಯ ನಾಯ್ಡು ಅವರಿಗೆ ಉಪ ರಾಷ್ಟ್ರಪತಿ ಸ್ಥಾನ ಬಹಳ ಬೋರು ತಂದಿದೆಯಂತೆ. ಸದಾ ಪ್ರೋಟೋಕಾಲ್‌ನಲ್ಲಿ ನಡೆಯುವ ಬದುಕು ನನಗೆ ಹಿಡಿಸೋದಿಲ್ಲ ಎಂದು ವೆಂಕಯ್ಯ ನಾಯ್ಡು ಅವರು ತಮ್ಮ ಆಪ್ತ ತೆಲುಗು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಯಾವಾಗಲೂ ವಿಶೇಷ ವಾಯುಸೇನೆಯ ವಿಮಾನದಲ್ಲಿ ಓಡಾಡಬೇಕು, ಹೈದರಾಬಾದ್‌ಗೆ ಹೋದರೂ ಮನೆಯಲ್ಲಿ ತಂಗುವಂತಿಲ್ಲ, ರಾಜಭವನದಲ್ಲಿ ತಂಗಬೇಕು. ಸದಾ 25 ಗನ್ ಮ್ಯಾನ್‌ಗಳು. ಹೀಗಾಗಿ ಜನಸಾಮಾನ್ಯರ ಜೊತೆ ಸಂಪರ್ಕವೇ ಇಲ್ಲದಂತಾಗಿದೆ ಎಂದು ವೆಂಕಯ್ಯ ದುಃಖ ತೋಡಿಕೊಂಡಿದ್ದಾರೆ.