Asianet Suvarna News Asianet Suvarna News

ಹಾವೇರಿಯ ಈ ದೇವಸ್ಥಾನದಲ್ಲಿ ಪ್ರಸಾದ ತಿಂದರೆ ಸಂತಾನಭಾಗ್ಯ ದೊರಕುತ್ತದೆಯೇ? ಮುಸ್ಲಿಮರೂ ಇಲ್ಲಿಗೆ ಬರುತ್ತಾರೆ

ಮಕ್ಕಳೇ ಆಗುವುದಿಲ್ಲ ಎಂದು ವೈದ್ಯರೇ ಕೈಚೆಲ್ಲಿದ ಪ್ರಕರಣಗಳಲ್ಲಿ ಜನರು ಇಲ್ಲಿ ಬಂದು ಪ್ರಸಾದ ಸೇವಿಸಿದಾಗ ಸಂತಾನ ಹೊಂದಿರುವುದುಂಟು. ನವರಾತ್ರಿಯ  ಒಂಬತ್ತು  ದಿನಗಳ ಕಾಲ ಪೂಜೆ , ಹೋಮ, ಹವನ  ಮಾಡಿ ಪ್ರಸಾದ ಮಾಡಲಾಗುತ್ತದೆ.

prasada given in shantesha temple for infertile women

ವರದಿ: ಸುರೇಶ್ ನಾಯ್ಕ್, ಹಾವೇರಿ

ಹಾವೇರಿ: ಇಲ್ಲಿಯ ಹಿರೇಕೇರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿರುವ ಶಾಂತೇಶ ದೇವಸ್ಥಾನದಲ್ಲಿ ವಿಜಯದಶಮಿ ದಿನಂದು ಭಕ್ತರ ದಂಡೇ ಹರಿದುಬರುತ್ತದೆ. ಈ ಭಕ್ತರಲ್ಲಿ ಮಹಿಳೆಯರೇ ಬಹುತೇಕ ತುಂಬಿರುತ್ತಾರೆ. ಕಾರಣ, ಇಲ್ಲಿ ಸಂತಾನಹೀನ ಮಹಿಳೆಯರಿಗೆ ಇದೇ ವಿಜಯದಶಮಿಯಂದು ಶಾಂತೇಶ ದೇವರ (ಆಂಜನೇಯ) ಪ್ರಸಾದ ನೀಡಲಾಗುತ್ತದೆ. ಇಲ್ಲಿ ಮದ್ಯಾಹ್ನ 2 ಗಂಟೆಯಿಂದ ನಾಲ್ಕು ಗಂಟೆಯವರೆಗೆ ಮಾತ್ರ ಪ್ರಸಾದ ನೀಡಲಾಗುತ್ತದೆ.

ಈ ಅರ್ಚಕರ ಪೂರ್ವಜರ ಕಾಲದಿಂದಲೂ ಇಲ್ಲಿ ಗಿಡಮೂಲಿಕೆಗಳನ್ನು  ಬಳಸಿ ಸಿದ್ಧಗೊಳಿಸಿದ  ಶಾಂತೇಶನ ಪ್ರಸಾದ  ನೀಡುತ್ತಾ ಬರಲಾಗಿದೆ. ಮಕ್ಕಳೇ ಆಗುವುದಿಲ್ಲ ಎಂದು ವೈದ್ಯರೇ ಕೈಚೆಲ್ಲಿದ ಪ್ರಕರಣಗಳಲ್ಲಿ ಜನರು ಇಲ್ಲಿ ಬಂದು ಪ್ರಸಾದ ಸೇವಿಸಿದಾಗ ಸಂತಾನ ಹೊಂದಿರುವುದುಂಟು. ನವರಾತ್ರಿಯ  ಒಂಬತ್ತು  ದಿನಗಳ ಕಾಲ ಪೂಜೆ , ಹೋಮ, ಹವನ  ಮಾಡಿ ಪ್ರಸಾದ ಮಾಡಲಾಗುತ್ತದೆ. ಮಹಿಳೆಯರಿಗೆ ತೆಂಗಿನಕಾಯಿ ಉಡಿ ತುಂಬಿದ ಬಳಿಕ ಬಾಳೆಹಣ್ಣಿನೊಂದಿಗೆ ಪ್ರಸಾದವನ್ನು ಅರ್ಚಕರು ನೀಡುತ್ತಾರೆ.

ಯಾವುದೇ ಧರ್ಮಭೇದವಿಲ್ಲದೇ ಎಲ್ಲ ವರ್ಗದ ಜನರು ವಿಜಯದಶಮಿ ದಿನದಂದು ಈ ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸುವುದು ವಿಶೇಷ.

Follow Us:
Download App:
  • android
  • ios