Asianet Suvarna News Asianet Suvarna News

ಪ್ರಣೀತಾ ಸುಭಾಷ್ ನಾಪತ್ತೆ ?

ಅದರ ಜೊತೆ ಅವರು ಇತ್ತೀಚೆಗೆ ಸ್ಕೇಟಿಂಗ್ಕೂಡ ಕಲಿತಿದ್ದಾರೆ. ಖುಷಿಯಾಗಿ ಸ್ಕೇಟಿಂಗ್ಆಡುತ್ತಿರುವ ಫೋಟೊಗಳನ್ನು ಸೋಷಿಯಲ್ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

Pranitha subhash missing
  • Facebook
  • Twitter
  • Whatsapp

ಯಾವಾಗ ‘ಅತ್ತಾರೆಂಟಿಕಿ ದಾರೇದಿ' ಸಿನಿಮಾ ಬಂತೋ ಆವಾಗಿಂದ ನಮ್ಮ ಕನ್ನಡದ ಪ್ರಣೀತಾ ಕರ್ನಾಟಕದಿಂದ ಕಾಣೆಯಾಗಿಬಿಟ್ಟಿದ್ದಾರೆ. ಅವರ ಇಲ್ಲಿನ ಅಭಿಮಾನಿಗಳು ಟಾರ್ಚ್ ಹಾಕಿಕೊಂಡು ಹುಡುಕುವುದಿದೆ. ಕನ್ನಡದಲ್ಲಿ ‘ಬ್ರಹ್ಮ'ನೇ ಅವರ ಕೊನೆಯ ಸಿನಿಮಾ. ಇಂತಿಪ್ಪ ಪ್ರಣಿತಾ ಸದ್ಯ ‘ಲೀಡರ್‌' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೂ ಅವರು ಆ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿಲ್ಲ. ಪ್ರಣೀತಾ ಕೂಡ ತಲೆಕೆಡಿಸಿಕೊಂಡಂತಿಲ್ಲ. ಅತ್ತ ತಮಿಳು, ತೆಲುಗಲ್ಲಿ ನಟಿಸುತ್ತಾ ಆರಾಮಾಗಿದ್ದಾರೆ. ಅದರ ಜೊತೆ ಅವರು ಇತ್ತೀಚೆಗೆ ಸ್ಕೇಟಿಂಗ್‌ ಕೂಡ ಕಲಿತಿದ್ದಾರೆ. ಖುಷಿಯಾಗಿ ಸ್ಕೇಟಿಂಗ್‌ ಆಡುತ್ತಿರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಅವರು ನಿಜವಾಗಿಯೂ ಸ್ಕೇಟಿಂಗ್‌ ಕಲಿತಿದ್ದಾರೋ ಬರಿ ಪೋಸ್‌ ಮಾತ್ರವೋ ಎಂದು ತಿಳಿಯುವುದು ಅವರು ಎಲ್ಲಿದ್ದಾರೆ ಎಂದು ಹುಡುಕಿದಷ್ಟೇ ತ್ರಾಸದಾಯಕ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios