ಮುಂಬರುವ ವರ್ಷದಲ್ಲಿ ದೇಶವನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತಗೊಳಿಸುವ ಪಣತೊಡುವಂತೆ ಅವರು ಈ ಸಂದರ್ಭ ಕರೆ ನೀಡಿದರು.
ನವದೆಹಲಿ(ಡಿ.31): ಹೊಸ ವರ್ಷಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಜನತೆಗೆ ಶುಭಕೋರಿದ್ದಾರೆ.
ಮುಂಬರುವ ವರ್ಷದಲ್ಲಿ ದೇಶವನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತಗೊಳಿಸುವ ಪಣತೊಡುವಂತೆ ಅವರು ಈ ಸಂದರ್ಭ ಕರೆ ನೀಡಿದರು.
‘‘ಹೊಸ ವರ್ಷ ನಮ್ಮ ವೈಭವಯುತ ದೇಶದಲ್ಲಿ ಪ್ರಗತಿ ಮತ್ತು ಸಮೃದ್ಧಿ ತರಲಿ ಎಂದು ಆಶಿಸುತ್ತೇನೆ. ನಮ್ಮ ಕನಸಿನ ಭಾರತ ಕಟ್ಟಲು ಒಂದಾಗೋಣ ಮತ್ತು ದೇಶವನ್ನು ಸ್ವಚ್ಛ ಹಾಗೂ ಮಾಲಿನ್ಯಮುಕ್ತ ಮಾಡುವ ಪ್ರತಿಜ್ಞೆ ಕೈಗೊಳ್ಳೋಣ’’ ಎಂದು ಮುಖರ್ಜಿಯವರು ದೇಶ, ವಿದೇಶಗಳಲ್ಲಿರುವ ಎಲ್ಲ ಭಾರತೀಯರಿಗೆ ಸಂದೇಶ ನೀಡಿದ್ದಾರೆ.